ವಿವಿಧ ಇಲಾಖೆಯಲ್ಲಿನ ಗ್ರೂಪ್‌ ಸಿ ಹುದ್ದೆಗಳಿಗೆ ಕೆಪಿಎಸ್ಸಿಯಿಂದ ಅರ್ಜಿ ಆಹ್ವಾನ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್‌ 'ಸಿ' ಗ್ರೂಪ್ ನ 1,353 ಹುದ್ದೆಗಳಿಗೆ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕ ಸೇವಾ ಆಯೋಗ ...
ಕೆಪಿಎಸ್ಸಿ ಲೋಗೋ
ಕೆಪಿಎಸ್ಸಿ ಲೋಗೋ
Updated on: 

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್‌ 'ಸಿ' ಗ್ರೂಪ್ ನ 1,353 ಹುದ್ದೆಗಳಿಗೆ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕ ಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಮುಖ್ಯವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ವಿವಿಧ ಶಿಕ್ಷಕರ ಮತ್ತು ನಿಲಯ ಪಾಲಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಉಳಿದಂತೆ ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಸದೀಯ ಸಚಿವಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಒಟ್ಟು ಹುದ್ದೆ: 1353
ಅರ್ಜಿ ಸಲ್ಲಿಕೆ ಪ್ರಾರಂಭ: ಅಕ್ಟೋಬರ್ 7
ಅರ್ಜಿ ಸಲ್ಲಿಸಲು ಕೊನೇ ದಿನ: ನವೆಂಬರ್ 7
ಅರ್ಜಿ ಶುಲ್ಕ: ಸಾಮಾನ್ಯ /ಒಬಿಸಿ– ರು.300, ಎಸ್ಸಿ/ಎಸ್ಟಿ–ರು.25
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 35
ವಿದ್ಯಾರ್ಹತೆ: ಪದವಿ/ಬಿಇಡಿ/ಪಿಯುಸಿ/ಎಸ್‌ಎಸ್‌ಎಲ್‌ಸಿ(ಹುದ್ದೆಗಳ ಅನುಸಾರ)
ಸಹಾಯವಾಣಿ ಸಂಖ್ಯೆ: 7899617837/ 9901294490
ಜಾಲತಾಣ: kpsc.kar.nic.in

ಪ್ರತಿ ಹುದ್ದೆಗೆ ಬೇರೆ ಬೇರೆಯಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಹುತೇಕ ಎಲ್ಲ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com