
ಬೆಂಗಳೂರು: ಕ್ಷುಲಕ ಕಾರಣಕ್ಕೆ ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ.
ಅಜಾಂ ಪಾಷಾ ಮೃತ ದುರ್ದೈವಿ. ಮೊಹರಂ ಅಂಗವಾಗಿ ಕೆ.ಆರ್ ಪುರಂ ನಲ್ಲಿ ಮೆರವಣಿಗೆ ನಡೆಯುತ್ತಿತ್ತು. ಮಹದೇವಪುರ ನಿವಾಸಿ ಅಜಂ ಪಾಷ ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿ ಕೆ.ಆರ್ ಪುರಂಗೆ ಬಂದಿದ್ದ.
ಮೊಹರಂ ಮೆರವಣಿಗೆ ಕೆ.ಆರ್ ಪುರಂ ನ ಶಾಲೆಯೊಂದರ ಬಳಿ ಬರುತ್ತಿದ್ದಂತೆ ಬರುತ್ತಿದ್ದಂತೆ ಐದಾರು ಮಂದಿಯ ಯುವಕರ ತಂಡ ಮೆರವಣಿಗೆಗೆ ಸೇರಿಕೊಂಡಿದ್ದಾರೆ. ಸೇರಿದ್ದವರೆಲ್ಲರೂ ಗಾಂಜಾ ನಶೆಯಲ್ಲಿದ್ದರು. ಯಾವಾಗ ಅವರು ಮೆರವಣಿಗೆಗೆ ಸೇರಿಕೊಂಡರೋ ಅಲ್ಲಿ ನೂಕಾಟ ತಳ್ಳಾಟ ಹೆಚ್ಚಾಗ್ತಾ ಹೋಯಿತು. ಈ ವೇಳೆ ಅಜ್ಮತ್ ಸಹೋದರ ಸೈಯ್ಯದ್ ರೋಷನ್ ಆಕಸ್ಮಿಕವಾಗಿ ಸುಹೈಲ್ ಎಂಬಾತನ ಕಾಲು ತುಳಿದಿದ್ದಾನೆ. ಸುಹೈಲ್ ರೋಶನ್ ಕೆನ್ನೆಗೆ ಹೊಡೆದಿದ್ದಾನೆ. ಜೊತೆಗೆ ಅಲ್ಲಿಂದ ಹೋಗಿ ತನ್ನ ಸ್ನೇಹಿತರಾದ ಖಾದೀರ್ ಮತ್ತು ನಯಾಜ್ ಜೊತೆ ವಾಪಸ್ ಬಂದಿದ್ದಾನೆ.
ಈ ಮೂವರು ರೋಷನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆಗಾಗಲೇ ರೋಶನ್ ನಾಪತ್ತೆಯಾಗಿದ್ದ.ಈ ವೇಳೆ ಅಲ್ಲಿಗೆ ಬಂದ ಮೂವರನ್ನು ಸಮಾಧಾನ ಪಡಿಸಲು ಅಜ್ಮತ್ ಯತ್ನಿಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಮೂವರು ಹರಿತವಾದ ಆಯುಧಗಳಿಂದ ಅಜ್ಮತ್ ಮೇಲೆ ಹಲ್ಲೆ ನಡೆಸಿದ್ದಾರೆ, ತಕ್ಷಣನೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಜ್ಮತ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಕೆ.ಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement