ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: 'ದೆವ್ವದ ಮನೆ' ಯಲ್ಲಿದ್ದ ಆನೆ ದಂತ ವಶ, ಓರ್ವನ ಬಂಧನ

ಮನೆಯೊಂದರ ಮೇಲೆ ದಾಳಿನಡೆಸಿರುವ ಬೆಳಗಾವಿ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ವಶ ಪಡಿಸಿಕೊಂಡಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಮನೆಯೊಂದರ ಮೇಲೆ ದಾಳಿನಡೆಸಿರುವ ಬೆಳಗಾವಿ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ವಶ ಪಡಿಸಿಕೊಂಡಿದ್ದಾರೆ.

ಓರ್ವನನ್ನು ಬಂಧಿಸಿದ ಪೊಲೀಸರು ಆನೆದಂತ, ಪ್ರಾಣಿಗಳ ಚರ್ಮ, ಉಗುರು ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ಅರಣ್ಯ ಸಂಪನ್ಮೂಲ ವಶಕ್ಕೆ ಪಡೆದಿದ್ದಾರೆ.

ಸಲೀಂ ಚಾಮಡೇವಾಲೆ ಅಎಂಬುವನನ್ನು  ಪೊಲೀಸರು ಬಂಧಿಸಿದ್ದಾರೆ. ಆನೆ ದಂತ ಸೇರಿದಂತೆ ಸಾವಿರಕ್ಕೂ ಹೆಚ್ಚು ಜಿಂಕೆ, ಸಾರಂಗದ ಕೊಂಬುಗಳು ಮತ್ತು ಅಪಾರ ಪ್ರಮಾಣದ ಪೆಂಗ್ವಿಲಿನ್ ಚಿಪ್ಪುಗಳನ್ನು ಈತನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈತನಿಂದ ವಶಕ್ಕೆ ಪಡೆದ ಆನೆ ದಂತ, ಜಿಂಕೆ, ಸಾರಂಗದ ಕೊಂಬುಗಳು ನೂರಾರು ಕೋಟಿ ಬೆಲೆ ಬಾಳಲಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
 
ಬೆಳಗಾವಿಯಿಂದ ವಿಯೆಟ್ನಾಂ ಹಾಗೂ ಚೀನಾ ದೇಶಕ್ಕೆ ಇವುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆನೆದಂತ ಸೇರಿದಂತೆ ಬಚ್ಚಿಟ್ಟಿದ ವಸ್ತುಗಳು ಯಾರ ಕಣ್ಣಿಗೂ ಬೀಳಬಾರದು ಎಂದು ಯೋಚಿಸಿದ್ದ ಆತ ಆತನ ಮನೆಯಲೆಲ್ ದೆವ್ವವಿದೆ ಎಂದು ಹೆದರಿಸಿ ಜನರನ್ನು ಹತ್ತಿರಕ್ಕೆ ಬರಲು ಬಿಡುತ್ತಿರಲಿಲ್ಲ. ಇನ್ನೂ ಈತನ ಕುಟುಂಬದ ಇತರ ಸದಸ್ಯರು ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಜಾವೀದ್ ಮುಶಾಪುರ, ಅಡಿವೇಶ ಗೂದಿಗೊಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿದೆ.  ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com