ವಿಧಾನ ಸೌಧದಲ್ಲಿ ಹಣ ಜಪ್ತಿ: ಇನ್ನೂ ವರದಿ ಸಲ್ಲಿಸದ ಪೊಲೀಸರು

ವಿಧಾನ ಸೌಧ ಗೇಟ್ ಬಳಿ ವಕೀಲ ಸಿದ್ದಾರ್ಥ ಅವರಿಂದ ವಶ ಪಡಿಸಿಕೊಂಡ 1.97 ಕೋಟಿ ಹಣದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಇನ್ನೂ ವರದಿ,,,
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು; ವಿಧಾನ ಸೌಧ ಗೇಟ್ ಬಳಿ ವಕೀಲ ಸಿದ್ದಾರ್ಥ ಅವರಿಂದ ವಶ ಪಡಿಸಿಕೊಂಡ 1.97 ಕೋಟಿ ಹಣದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಇನ್ನೂ ವರದಿ ಸಲ್ಲಿಸಿಲ್ಲ.

ವಕೀಲ ಸಿದ್ದಾರ್ಥ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹಲವು ವ್ಯಾಜ್ಯಗಳನ್ನ ಹೈ ಕೋರ್ಟ್ ನಲ್ಲಿ ನಿರ್ವಹಿಸುತ್ತಿದ್ದಾರೆ.

ದಾಖಲೆ ನೀಡಿ ನಗದನ್ನು ವಾಪಸ್‌ ಪಡೆಯುವಂತೆ ಸಿದ್ದಾರ್ಥ್ ಅವರಿಗೆ ತಿಳಿಸಲಾಗಿದೆ. ಜತೆಗೆ ಆದಾಯ ತೆರಿಗೆ ಅಧಿಕಾರಿಗಳು ಸಹ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹಣವನ್ನು ತಮ್ಮ ಸುಪರ್ದಿಗೆ ನೀಡುವಂತೆ ಕೋರಿದ್ದಾರೆ. ಪತ್ತೆಯಾದ ಹಣಕ್ಕೆ ದಾಖಲೆಗಳಿಲ್ಲ. ತೆರಿಗೆ ವಂಚಿಸಿದ ಹಣ ಇದಾಗಿದೆ ಎಂಬ ಅನುಮಾನವಿದೆ.  ಹಣದ ಮೂಲದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಬ್ಯಾಗ್‌ನಲ್ಲಿದ್ದ ಹಣವನ್ನು ಎಣಿಕೆ ಮಾಡಿದಾಗ ಅದರಲ್ಲಿ ರು.1.97 ಕೋಟಿ ಇರುವುದು ಖಾತ್ರಿಯಾಗಿತ್ತು. ಹಣದ ಬಗ್ಗೆ ಹೇಳಿಕೆ ನೀಡಿರುವ ಸಿದ್ದಾರ್ಥ್‌, ಚಾಲುಕ್ಯ ವೃತ್ತದಲ್ಲಿ ಹೊಸ ಕಚೇರಿ ಖರೀದಿಸುವ ಉದ್ದೇಶದಿಂದ ಹಣವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾರೆ.

ಹೈ–ಪಾಯಿಂಟ್‌ನಲ್ಲಿ ಕಚೇರಿಯೊಂದರ ಖರೀದಿ ಬಗ್ಗೆ ಸಿದ್ದಾರ್ಥ್‌, ಆ ಕಟ್ಟಡದ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದರು. ಹಣ ನೀಡುವುದೊಂದೇ ಬಾಕಿ ಇತ್ತು. ಈ ಬಗ್ಗೆ ಕಟ್ಟಡದ ಮಾಲೀಕರ ಹೇಳಿಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ಸಿದ್ದಾರ್ಥ,ತಮ್ಮ ವೋಕ್ಸ್‌ ವ್ಯಾಗನ್‌ ಕಾರಿನಲ್ಲಿ ಹಣವಿಟ್ಟುಕೊಂಡು ಮಧ್ಯಾಹ್ನ 1.35ಕ್ಕೆ ಗೇಟ್‌ ನಂಬರ್‌ 1ರ ಮೂಲಕ ವಿಧಾನಸೌಧದ ಆವರಣದೊಳಗೆ ಹೋಗುತ್ತಿದ್ದರು. ಈ ವೇಳೆ ಕಾರಿನ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ, 1.97 ಕೋಟಿ ನಗದು ಜಪ್ತಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com