ಮೈಸೂರು: ರಾಜ ಕಾಲುವೆಯಲ್ಲಿ ನಟ ದರ್ಶನ್ ಸೇರಿದಂತೆ ಕೆಲವು ಪ್ರತಿಷ್ಠಿತರ ಮನೆಗಳಿದ್ದು ಆ ಮನೆಗಳನ್ನು ಸರ್ಕಾರ ಕೆಡವುತ್ತಿಲ್ಲ, ಸಾಮಾನ್ಯ ಜನರಿಗೊಂದು ನ್ಯಾಯ, ಗಣ್ಯ ವ್ಯಕ್ತಿಗಳಿಗೆ ಇನ್ನೊಂದು ಎಂಬ ಆಪಾದನೆಗಳು ಕೇಳಿಬರುತ್ತಿವೆ. ಇಷ್ಟು ದಿನ ನಟ ದರ್ಶನ್ ಈ ಕುರಿತು ಪ್ರತಿಕ್ರಿಯಿಸಿರಲಿಲ್ಲ. ಆದರೆ ಇಂದು ಸ್ವತಃ ದರ್ಶನ್ ಮಾಧ್ಯಮಗಳಿಗೆ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.