ಶಿವಮೊಗ್ಗ ತೆಪ್ಪ ದುರಂತ: ಮತ್ತೆ 4 ಮೃತದೇಹ ಪತ್ತೆ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಗಣೇಶ ವಿಸರ್ಜನೆ ವೇಳೆ ತುಂಗಭದ್ರ ನದಿಯಲ್ಲಿ ಸಂಭವಿಸಿದ ತೆಪ್ಪ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ಕು ಮೃತದೇಹಗಳನ್ನು ಸಿಬ್ಬಂದಿಗಳು ಹೊರತೆಗೆದಿದ್ದು, ಇದರಂತೆ...
ಶಿವಮೊಗ್ಗ ತೆಪ್ಪ ದುರಂತ
ಶಿವಮೊಗ್ಗ ತೆಪ್ಪ ದುರಂತ

ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ತುಂಗಭದ್ರ ನದಿಯಲ್ಲಿ ಸಂಭವಿಸಿದ ತೆಪ್ಪ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ಕು ಮೃತದೇಹಗಳನ್ನು ಸಿಬ್ಬಂದಿಗಳು ಹೊರತೆಗೆದಿದ್ದು, ಇದರಂತೆ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಬಳಿ ಬುಧವಾರ ಮಧ್ಯಾಹ್ನ ಗಣಪತಿ ವಿಗ್ರಹ ವಿಸರ್ಜನೆ ವೇಳೆ ತೆಪ್ಪ ದುರಂತ ಸಂಭವಿಸಿತ್ತು. ತೆಪ್ಪದಲ್ಲಿ 33ಕ್ಕೂ ಹೆಚ್ಚು ಮಂದಿ ಗಣೇಶ ವಿಗ್ರಹ ವಿಸರ್ಜನೆ ನಡೆಸುತ್ತಿದ್ದ ವೇಳೆ ತೆಪ್ಪ ಮುಳುಗಿತ್ತು. ತೆಪ್ಪ ಮುಳುಗುವುದಕ್ಕೂ ಮುನ್ನ ಅಪಾಯ ಅರಿತ 20 ಮಂದಿ ಈಜಿ ದಡ ಸೇರಿಕೊಂಡಿದ್ದರು.

ಇದರಂತೆ ಕಾರ್ಯಾಚರಣೆಗಿಳಿದಿದ್ದ ಅಧಿಕಾರಿಗಳು ಗುರುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 4 ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ತೆಪ್ಪ ದುರಂತದಲ್ಲಿ ಈ ವರೆಗೂ 11 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗುರುವಾರ ಪತ್ತೆಯಾದವರನ್ನು ಶಂಕರ್ (21), ಚಂದ್ರಪ್ಪ (50), ಗಣೇಶ್ (22). ನಯನ್ ಕುಮಾರ್ (21), ಸಾಗರ್ (26) ಎಂದು ಗುರ್ತಿಸಲಾಗಿದೆ.

ಬುಧವಾರ ಪತ್ತೆಯಾದವರನ್ನು ಸಿ.ಮಂಜುನಾಥ್ (35), ಪಿ.ಹೆಚ್. ಗಣೇಶ್ (22), ವೀರೇಶ್ (22), ಜೀವನ್ (21), ರಮೇಶ್ (20), ಶಿವಕುಮಾರ್ (18) ಮತ್ತು ವೀರಭದ್ರಪ್ಪ (20) ಎಂದು ಗುರ್ತಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com