ಮಂಗಳೂರು ವಿವಿ ಶೌಚಾಲಯದಲ್ಲಿ ಕ್ಯಾಮೆರಾ: ವಿದ್ಯಾರ್ಥಿಗೆ ಜಾಮೀನು ಮಂಜೂರು

ಸಾಕಷ್ಟು ಆತಂಕ ಸೃಷ್ಠಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ವಿದ್ಯಾರ್ಥಿಗೆ ಗುರುವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಸಾಕಷ್ಟು ಆತಂಕ ಸೃಷ್ಠಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ವಿದ್ಯಾರ್ಥಿಗೆ ಗುರುವಾರ ಜಾಮೀನು ದೊರೆತಿದೆ.

ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂವಿಜ್ಞಾನ ವಿದ್ಯಾರ್ಥಿ ಸಂತೋಷ್ ಆಚಾರ್ಯ (22) ಎಂಬ ವಿದ್ಯಾರ್ಥಿಯನ್ನು ಬುಧವಾರ ಬಂಧಿಸಲಾಗಿತ್ತು. ಇದರಂತೆ ವಿಚಾರಣೆ ನಡೆಸಿರುವ ನ್ಯಾಯಾಲಯವು ವಿದ್ಯಾರ್ಥಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.

ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ಕ್ಯಾಮೆರಾ ಇರುವ ವಿಚಾರ ಆಗಸ್ಟ್ 24ರಂದು ವಿದ್ಯಾರ್ಥಿಯೊಬ್ಬಳ ಗಮನಕ್ಕೆ ಬಂದಿತ್ತು. ಇದರಂತೆ ವಿದ್ಯಾರ್ಥಿನಿ ಈ ವಿಚಾರವನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಳು. ಈ ಘಟನೆ ವಿವಿಯಲ್ಲಿರುವ ವಿದ್ಯಾರ್ಥಿನಿಯರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ವಿವಿಯು ಆಗಸ್ಟ್ 31 ರಂದು ಸಿಂಡಿಕೋಟ್ ಸಭೆ ನಡೆಸಿ ಪ್ರಕರಣ ಸೈಬರ್ ಕ್ರೈಂಗೆ ಸಂಬಂಧಿಸಿದ್ದು, ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸರಿಗೆ ಒಪ್ಪಿಸುವುದೇ ಸರಿ ಎಂದು ನಿರ್ಧಾರ ಕೈಗೊಂಡಿತ್ತು. ಇದರಂತೆ ತನಿಖೆ ಆರಂಭಿಸಿದ್ದ ಪೊಲೀಸರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ವಿಡಿಯೋ ಕ್ಲಿಪ್ ಗಳು ಆಗಸ್ಟ್ 7 ಮತ್ತು 11 ತಾರೀಕಿನಂದು ಬೇರೆ ಫೋನ್ ಗೆ ಸೆಂಡ್ ಆಗಿದೆ ಎಂಬುದರ ಬಗ್ಗ ಮಾಹಿತಿ ಕಲೆ ಹಾಕಿತ್ತು.

ಇದರಂತೆ ಭೂವಿಜ್ಞಾನ ವಿದ್ಯಾರ್ಥಿಯಾಗಿದ್ದ ಸಂತೋಷ್ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ, ಬುಧವಾರ ಬಂಧನಕ್ಕೊಳಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com