ಬೆಂಗಳೂರು: ಒಂದೇ ರಾತ್ರಿಯಲ್ಲಿ 1,081 ಡ್ರಿಂಕ್ ಅಂಡ್ ಡ್ರೈವ್ ಕೇಸು ದಾಖಲು

ನಗರ ಸಂಚಾರ ಪೊಲೀಸರು ಶನಿವಾರ ರಾತ್ರಿ ಸುಮಾರು 1,081 ಕುಡಿದು ಚಾಲನೆ ಮಾಡಿದ ಕೇಸ್ ದಾಖಲಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರ ಸಂಚಾರ ಪೊಲೀಸರು ಶನಿವಾರ ರಾತ್ರಿ ಸುಮಾರು 1,081 ಕುಡಿದು ಚಾಲನೆ ಮಾಡಿದ ಕೇಸ್ ದಾಖಲಿಸಿದ್ದಾರೆ.

ಶನಿವಾರ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ನಗರದ ಸುಮಾರು 100 ಸ್ಥಳಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿತು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಡದು ಚಾಲನೆ ಮಾಡುವವರ ಚಾಲನ ಪರವಾನಗಿ ಅಮಾನತು ಮಾಡುವಂತೆ ಸಾರಿಗೆ ಇಲಾಖೆಗೆ ನಗರ ಸಂಚಾರ ಪೊಲೀಸರು ಶಿಫಾರಸು ಮಾಡಿದ್ದಾರೆ.

ಈ ವರ್ಷದ ಜುಲೈನಲ್ಲಿ ರಾಜ್ಯ ಸರ್ಕಾರ ನೈಟ್ ಲೈಫ್ ಅವಧಿಯನ್ನು ಮಧ್ಯರಾತ್ರಿ 1 ಗಂಟೆವರೆಗೂ ವಿಸ್ತರಿಸಿ ಆದೇಶ ಹೊರಡಿಸಿತ್ತು. ಹೀಗಾಗಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗಿವೆ.

ಜೂನ್ ನಲ್ಲಿ 2.482 ಕೇಸ್ ಗಳು, ಜುಲೈನಲ್ಲಿ 5.571 ಆಗಸ್ಟ್ ನಲ್ಲಿ 6,194 ಕೇಸುಗಳು ದಾಖಲಾಗಿವೆ.

ಮೋಟಾರು ವಾಹನ ಕಾಯ್ದೆ ಪ್ರಕಾರ ಸೆಕ್ಷನ್ 185 ರ ಪ್ರಕಾರ, ವಾಹನ ಚಾಲನೆ ಮಾಡುವ ವ್ಯಕ್ತಿಯ ದೇಹದ ರಕ್ತದಲ್ಲಿ 30 ಮಿಲಿಗ್ರಾಂ ಗಿಂತ ಹೆಚ್ಚಿನ ಆಲ್ಕೋಹಾರ್ ಪ್ರಮಾಣವಿದ್ದರೇ 6 ತಿಂಗಳ ಸಾಧಾರಣ ಶಿಕ್ಷೆ ವಿಧಿಸಬಹುದಾಗಿದೆ. ಅದೇ ವ್ಯಕ್ತಿ ಮತ್ತೆ ಕುಡಿದು ಸಿಕ್ಕಿ ಹಾಕಿಕೊಂಡರೇ ಎರಡು ವರ್ಷಗಳ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಸಂಚಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com