ಬೆಂಗಳೂರು: ಕಾಲ್ತುಳಿತ ಮಹಿಳೆ ಸಾವು, ಹಲವರಿಗೆ ಗಾಯ

ಆಹಾರ ಸಾಮಾಗ್ರಿ ಟೋಕನ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 40 ವರ್ಷದ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ...
ಆಹಾರ ಸಾಮಾಗ್ರಿ ಟೋಕನ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು
ಆಹಾರ ಸಾಮಾಗ್ರಿ ಟೋಕನ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು

ಬೆಂಗಳೂರು: ಆಹಾರ ಸಾಮಾಗ್ರಿ ಟೋಕನ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 40 ವರ್ಷದ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮುಂದಿನ ವರ್ಷದ ರಂಜಾನ್ ಹಬ್ಬಕ್ಕಾಗಿ ಉಚಿತವಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸಲು, ಶಿವಾಜಿನಗರದ ಸಮುದಾಯ ಭವನವೊಂದರಲ್ಲಿ ಟೋಕನ್ ಹಂಚುವ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ದೇವರ ಜೀವನಹಳ್ಳಿ  ಸಮೀಪದ ಮೋದಿ ರಸ್ತೆ ನಿವಾಸಿ ಜೀನತ್ ಉನ್ನೀಸಾ ಪಾಷಾ ಸಾವನ್ನಪ್ಪಿದ್ದಾರೆ.

ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಸೈಯ್ಯದ್ ಆಸಿಫ್ ಎಂಬುವರು 2017ರ ಮೇನಲ್ಲಿ ಉಚಿತವಾಗಿ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಮಂಗಳವಾರ ರಾತ್ರಿಯಿಂದಲೇ ಜನಜಂಗುಳಿ ನೆರೆದಿತ್ತು. ಸಮುದಾಯ ಭವನದ ಗೇಟ್ ಅನ್ನು ತೆರೆದ ಕೂಡಲೇ ಎಲ್ಲರೂ ಒಟ್ಟಿಗೆ ಒಳಗೆ ನುಗ್ಗಿದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು, ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಲು ಮುಂದಾದರು, ತಪ್ಪಿಸಿಕೊಳ್ಳಲು ಒಳಗೆ ಓಡಿ ಹೋಗಲು ಯತ್ನಿಸಿದ ಜೀನತ್ ಉನ್ನೀಸಾ ಕೆಳಗೆ ಬಿದ್ದರು. ಮೇಲೇಳಲಾಗದೇ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿ ಚಾಮುಂಡಿಪುರದ ನಿವಾಸಿ ಹೀನಾ ಎಂಬುವರು ಆರೋಪಿಸಿದ್ದಾರೆ.

ಲಾಠಿ ಚಾರ್ಜ್ ಮಾಡಿದ್ದಕ್ಕೆ ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಕೂಪನ್ ಪಡೆದುಕೊಳ್ಳಲು ತುಮಕೂರಿನಿಂದಲೂ ಸಹ ಜನ ಆಗಮಿಸಿದ್ದರು. ಜೀನತ್ ಉನ್ನೀಸಾ ಗೆ ಮೂರು ಮಕ್ಕಳಿದ್ದು, ಆಕೆಯ ಪತಿ ಅನ್ಚಾರ್ ಪಾಶಾ ವರ್ಕ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com