63 ಲಕ್ಷ ವಾಹನಗಳಿವೆ ಬೆಂಗಳೂರು ಮಹಾನಗರಿಯಲ್ಲಿ: ನಿಲುಗಡೆಗೆ ಸ್ಥಳವೆಲ್ಲಿ?

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದರೇ ವಾಹನ ಮಾಲೀಕರಿಗೆ ಮೂರು ಪಟ್ಟು ದಂಡ ವಿಧಿಸಲು ನಗರ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಆದರೆ ದಂಡ .,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದರೇ ವಾಹನ ಮಾಲೀಕರಿಗೆ ಮೂರು ಪಟ್ಟು ದಂಡ ವಿಧಿಸಲು ನಗರ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಆದರೆ ದಂಡ ಹೆಚ್ಚಳ ಮಾಡಿರುವುದರಿಂದ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸುವುದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
 
ಸಂಚಾರಿ ಪೊಲೀಸರು 3 ಪಟ್ಟು ದಂಡ ಹೆಚ್ಚಿಸಿರುವುದು ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸುವ ವಾಹನ ಮಾಲೀಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಬದಲಿಗೆ ಅಕ್ರಮ ಪಾರ್ಕಿಂಗ್ ಸ್ಥಳಗಳು ಮತ್ತಷ್ಟು ಹೆಚ್ಚುತ್ತವೆ ಎಂದು ನಗರದ ತಜ್ಞರು ಹೇಳಿದ್ದಾರೆ.

ನಗರದಲ್ಲಿ ಸರಿಯಾದ ಪಾರ್ಕಿಂಗ್ ಸ್ಥಳ ಹುಡುಕಿ ವಾಹನ ನಿಲುಗಡೆ ಮಾಡುವುದು ಕಷ್ಟದ ಕೆಲಸ, ನೋ ಪಾರ್ಕಿಂಗ್  ನಲ್ಲಿ ನಿಲ್ಲಿಸಿದವರಿಗೆ ಮೂರು ಪಟ್ಟು ದಂಡ ವಿಧಿಸಲು ಮುಂದಾಗಿರುವ ಇಲಾಖೆ ಕ್ರಮ ಸರಿಯಿಲ್ಲ ಎಂದು ಕಮರ್ಶಿಯಲ್ ಸ್ಟ್ರೀಟ್ ನ ವಾಹನ ಮಾಲೀಕರೊಬ್ಬರು ತಿಳಿಸಿದ್ದಾರೆ.

ಜೂನ್ 2016 ರ ವೇಳೆಗೆ ಬೆಂಗಳೂರಿನಲ್ಲಿ 63.81 ಲಕ್ಷ ವಾಹನಗಳು ಇರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆತ್ಚಾಗುವ ಸಾಧ್ಯತೆಯಿದೆ. ಕಾರ್ ಪಾರ್ಕಿಂಗ್ ಗೆ 14ಸ್ಕ್ವೇರ್ ಮೀಟರ್ ಸ್ಥಳ ಬೇಕು. ಹಾಗೆಯೇ ದ್ವಿಚ್ಕರ ವಾಹನ ನಿಲ್ದಾಣಕ್ಕೆ 3 ಸ್ಕ್ವೇರ್ ಮೀಟರ್  ಜಾಗ ಸಾಕು ಎಂದು ತಜ್ಞರು ಅಬಿಪ್ರಾಯ ಪಟ್ಟಿದ್ದಾರೆ.

ಜನವರಿಯಿಂದ ಆಗಸ್ಟ್ ವರೆಗೆ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದ ಸಂಬಂಧ ಸುಮಾರು 15.63 ಲಕ್ಷ ಕೇಸುಗಳು ದಾಖಲಾಗಿವೆ. ಕಡಿಮೆ ದಂಡ ವಿಧಿಸುತ್ತಿದ್ದರಿಂದ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳಿಗೆ ಹೊಸದಾಗಿ 3 ಪಟ್ಟು ದಂಡ ಹೆಚ್ಚಿಸಿರುವುದರಿಂದ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಮೊದಲು ಎರಡು ಬಾರಿ ಯೋಚನೆ ಮಾಡಲಿದ್ದಾರೆ ಎಂದು ನಗರ ಸಂಚಾರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ಎರಡು ಪ್ರಮುಖ ರಸ್ತೆಗಳಲ್ಲಿ ಹಾಗೂ ಹಲವು ಸ್ಥಳಗಳಲ್ಲಿ ಬಿಬಿಎಂಪಿ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿದೆ. ಮತ್ತಷ್ಟು ಪಾರ್ಕಿಂಗ್ ಸ್ಥಳಗಳನ್ನು ಸ್ಥಾಪಿಸಲು ಪಾಲಿಕೆ ಚಿಂತನೆ ನಡೆಸುತ್ತಿದೆ.

ರಸೇಲ್ ಮಾರ್ಕೆಟ್ ಮತ್ತ ಗಾಂಧಿ ಬಜಾರ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರದ 9 ಸ್ಥಳಗಳಲ್ಲಿ ಬಿಎಂಟಿಸಿ ಬಸ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಯನಗರ ವೊಂದನ್ನು ಬಿಟ್ಟು, ಶಾಂತಿ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಬಿಎಂಟಿಸಿ ಬಸ್ ಗಳ ನಿಲ್ದಾಣಕ್ಕೆ ಸ್ಥಳ ನಿರ್ಮಾಣ ಮಾಲಾಗಿದೆ.

ಜೂನ್ 2016 ರ ವೇಳೆಗೆ  63.81 ಲಕ್ಷ ವಾಹನಗಳು ಬೆಂಗಳೂರಿನಲ್ಲಿ ಇರುವುದು ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಇಷ್ಟು ಸಂಖ್ಯೆಯ ವಾಹನಗಳಿಗೆ ಸರಿಯಾದ ನಿಲುಗಡೆ ಸ್ಥಳವಿಲ್ಲದಿರುವುದು ವಿಪರ್ಯಾಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com