ಸಂಚಾರ ನಿಯಮ ಉಲ್ಲಂಘನೆ: ಈಗ ಕಾರ್ಡ್ ಮೂಲಕ ದಂಡ ಪಾವತಿಸಬಹುದು!

ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಉಜ್ಜಿ ವಾಹನ ಚಾಲಕರು ಇನ್ನು ಮುಂದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಉಜ್ಜಿ ವಾಹನ ಚಾಲಕರು ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಸಬಹುದು.
ಬೆಂಗಳೂರು ಸಂಚಾರಿ ಪೊಲೀಸರು ನಿನ್ನೆ ಖಾಸಗಿ ಡಿಜಿಟಲ್ ಸಹಾಯಕ ಸಾಧನವನ್ನು ಆರಂಭಿಸಿದರು. ಸಂಚಾರಿ ಪೊಲೀಸರು ಈಗಾಗಲೇ 650ರಲ್ಲಿ  75 ಪಿಡಿಎ ಸಾಧನಗಳನ್ನು  ಬಳಸಲು ಆರಂಭಿಸಿದ್ದಾರೆ. ಏಪ್ರಿಲ್ ಕೊನೆಗೆ ಉಳಿದ ಸಾಧನಗಳು ಕಾರ್ಯನಿರ್ವಹಿಸಲು ಆರಂಭಿಸಲಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಹಣ ಪಾವತಿ ಮಾಡದಿರುವವರನ್ನು ಕಂಡುಹಿಡಿದು ದಂಡ ಹಾಕುತ್ತಿದ್ದ ಬ್ಲಾಕ್ ಬೆರ್ರಿ ಸಾಧನದ ಜಾಗದಲ್ಲಿ ಈ ಹೊಸ ಸಾಧನ ಬರಲಿದೆ. 
ಇನ್ ಬಿಲ್ಟ್ ಪ್ರಿಂಟರ್, ಕ್ಯಾಮರಾ ಮತ್ತು ಜಾರಿ ಅರ್ಜಿಗಳನ್ನು ಈ ಹೊಸ ಸಾಧನ ಒಳಗೊಂಡಿರುತ್ತದೆ. ಪ್ರಸ್ತುತ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಾಯಿಂಟ್ ಆಫ್ ಸೇಲ್ ಮೆಶಿನ್ ಗಳು ಮಾತ್ರ ಸಿಗುತ್ತವೆ.
ಜಾರಿಗೆ ಬರದಿರುವ ಬಿಎಂಟಿಸಿಯ ನಗದುರಹಿತ ಯೋಜನೆ: ನಗದುರಹಿತ ಪ್ರಯಾಣ ಯೋಜನೆಯ ಆರಂಭಕ್ಕೆ ನೀಡಲಾಗಿದ್ದ ಗಡುವನ್ನು ಬಿಎಂಟಿಸಿ ಮತ್ತೆ ಮುರಿದಿದೆ. ಮಾರ್ಚ್ ಕೊನೆಯ ವೇಳೆಗೆ ಸ್ಮಾರ್ಟ್ ಕಾರ್ಡು ಸೌಲಭ್ಯವನ್ನು ಆರಂಭಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ಹೇಳಿದ್ದರು. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ಬಿಎಂಟಿಸಿ ತನ್ನ ಸ್ಮಾರ್ಟ್ ಕಾರ್ಡು ಸೌಲಭ್ಯವನ್ನು ಎಸಿ ವೊಲ್ವೊ ಬಸ್ ನಲ್ಲಿ 335-ಇ ಮಾರ್ಗದಲ್ಲಿ (ಕೆಂಪೇಗೌಡ ಬಸ್ ನಿಲ್ದಾಣದಿಂದ  ಕಾಡುಗೋಡಿ) ಪ್ರಾಯೋಗಿಕ ಆಧಾರದಲ್ಲಿ 100 ಪ್ರಯಾಣಿಕರಿಗೆ ನೀಡಲು ನಿರ್ಧರಿಸಿತ್ತು.
ಸೆಲ್ಫಿ ವಿತ್ ಮೈ ಬಿಎಂಟಿಸಿ: ಬಿಎಂಟಿಸಿಯ 87ನೇ ಬಸ್ ದಿನದ ಅಂಗವಾಗಿ ಬೆಂಗಳೂರಿನ ಎನ್ ಜಿಒ ಕಾರ್ಯಕರ್ತರು ಸೆಲ್ಫಿ ವಿತ್ ಮೈ ಬಿಎಂಟಿಸಿ ಆರಂಭಿಸಿದ್ದಾರೆ. ಬಸ್ ನ್ನು ನಗರದ ನಾಗರಿಕರು ಪ್ರಾಥಮಿಕ ಪ್ರಯಾಣ ವಾಹನವನ್ನಾಗಿ ಬಳಸಿಕೊಳ್ಳಬೇಕೆಂಬುದು ಇದರ ಉದ್ದೇಶ. ಕಾರ್ಯಕರ್ತರು ಟಿಕೆಟ್ ಖರೀದಿಸಿ ಬಿಎಂಟಿಸಿ ಬಸ್ ನಲ್ಲಿ  ಪ್ರಯಾಣಿಸುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಎಂಟಿಸಿ ಕೆ.ಆರ್ ಮಾರ್ಕೆಟ್ ನಿಂದ ಶ್ರೀ ಎಂ. ವಿಶ್ವೇಶ್ವರಯ್ಯ ಲೇ ಔಟ್ 9ನೇ ಬ್ಲಾಕ್ 235 ಎಬಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಶ್ವೇಶ್ವರಯ್ಯ ಲೇ ಔಟ್ 238 ಯುಸಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಲಿಂಗದೀರನಹಳ್ಳಿಗೆ 243ಎಲ್ ಮತ್ತು ಕೆ.ಆರ್.ಮಾರ್ಕೆಟ್ ನಿಂದ ಮರಳವಾಡಿಗೆ 213 ಡಬ್ಲ್ಯು ಬಸ್ ಸಂಚಾರ ಆರಂಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com