ಬುಧವಾರ ಸಂಜೆ ಸುರಿದ ಮಳೆ
ರಾಜ್ಯ
ರಾಜ್ಯದ ಹಲವೆಡೆ ಮಳೆ: ಬೆಂಗಳೂರಲ್ಲೂ ವರುಣನ ಸಿಂಚನ
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಬುಧವಾರದಿಂದ ಆರಂಭವಾಗಿರುವ ಪೂರ್ವ ಮನ್ಸೂನ್ ಶುಕ್ರವಾರದವರೆಗೂ ...
ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಬುಧವಾರದಿಂದ ಆರಂಭವಾಗಿರುವ ಪೂರ್ವ ಮುಂಗಾರು ಶುಕ್ರವಾರದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಗುರುವಾರ ಬೆಂಗಳೂರಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ ಎಂದು ವರುಣ ಮಿತ್ರ ಹೇಳಿದೆ. ಶುಕ್ರವಾರ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು ಮೋಡ ಕವಿದ ವಾತಾವರಣ ಇರಲಿದೆ.
ಕೋಲಾರ, ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ, ಬೆಂಗಳೂರಲ್ಲಿ ಸುಮಾರು 1 ಗಂಟೆ ಕಾಲ ಮಳೆಯಾಗಿದ್ದರೂ ತಾಪಮಾನದಲ್ಲಿ ಮಾತ್ರ ಬದಲಾವಣೆಯಿಲ್ಲ, ಮಳೆಯ ನಂತರ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಷ ಏರಿಕೆಯಾಗಲಿದೆ. ಬುಧವಾರ 33.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ