ಬೆಂಗಳೂರು: ವಿಮೆ ಕಂತು ಏರಿಕೆ, ಹಳೆ ವಾಹನ ನಿಷೇಧ ಹಾಗೂ ಆರ್‌ಟಿಒ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದಕ್ಷಿಣ ಭಾರತದಾದ್ಯಂತ ಲಾರಿ ಹಾಗೂ ವಾಣಿಜ್ಯ ವಾಹನಗಳ ಮಾಲೀಕರು ನಡೆಸುತ್ತಿದ್ದ ಲಾರಿ ಮುಷ್ಕರ ಅಂತ್ಯಗೊಂಡಿದೆ.
ಹೈದರಾಬಾದ್‍ನಲ್ಲಿ ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ( ಐಆರ್‌ಡಿಎ) ಜತೆ ಲಾರಿ ಮಾಲೀಕರು ಶನಿವಾರ ಸಭೆ ನಡೆಸಿದ ನಂತರ ಲಾರಿ ಮುಷ್ಕರ ಅಂತ್ಯಗೊಳಿಸಿದ್ದಾರೆ.
ಶೇ 50.ರಷ್ಟಿದ್ದ ವಿಮೆ ಪ್ರೀಮಿಯಮ್ ದರವನ್ನು ಶೇ 23. ರಷ್ಟು ಇಳಿಕೆ ಮಾಡಲು ಐಆರ್‌ಡಿಎ ಸಮ್ಮತಿಸಿದ ಕಾರಣ, ಲಾರಿ ಮುಷ್ಕರ ಅಂತ್ಯಗೊಳಿಸಲು ಲಾರಿ ಹಾಗೂ ವಾಣಿಜ್ಯ ವಾಹನಗಳ ಮಾಲೀಕರು ತೀರ್ಮಾನಿಸಿದ್ದಾರೆ. ಮುಷ್ಕರ ನಿರತರ ಕೆಲವೊಂದು ಬೇಡಿಕೆಗಳನ್ನು ಭಾಗಶಃ ಈಡೇರಿಸಲಾಗಿದೆ.
ಕಳೆದ 9 ದಿನದಿಂದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ,ಪುದುಚೇರಿ ಹಾಗೂ ತೆಲಂಗಾಣದಲ್ಲಿ ಲಾರಿಗಳ ಸಂಚಾರ ಸ್ಥಗಿತವಾಗಿತ್ತು. ಏಪ್ರಿಲ್ 10 ರಿಂದ ದೇಶಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.