ಚಿತ್ರದುರ್ಗ: ಕೊನೆಗೂ ಬೋನಿಗೆ ಬಿತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆ

ಹಾಲಿಗೊಂಡನಹಳ್ಳಿ ಸಮೀಪದ ಕರೆಕಲ್ಲುಗುಡ್ಡ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಶನಿವಾರ ಸೆರೆಯಾಗಿದೆ....
ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ
ಚಿತ್ರದುರ್ಗ: ಹಾಲಿಗೊಂಡನಹಳ್ಳಿ ಸಮೀಪದ ಕರೆಕಲ್ಲುಗುಡ್ಡ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಶನಿವಾರ ಸೆರೆಯಾಗಿದೆ.
ಈ ಭಾಗದಲ್ಲಿ ಹಲವು ದಿನಗಳಿಂದ ಸಂಜೆಯ ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ  ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಮಾರ್ಚ್ 25ರಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.
ಬೋನಿನೊಳಗೆ ಕಟ್ಟಿಹಾಕಿದ್ದ ನಾಯಿಯ ಬೇಟೆಗೆ ಬಂದ ಚಿರತೆ ಕೊನೆಗೂ ಸೆರೆಯಾಗಿದೆ. ಅದನ್ನು ಸದ್ಯ ಪರಶುರಾಂಪುರ ವಲಯ ಅರಣ್ಯ ಕಚೇರಿಯಲ್ಲಿ ಇಡಲಾಗಿದ್ದು, ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಚಿರತೆ ಸೆರೆಗಾಗಿ ನಿತ್ಯವೂ ಹಗಲು, ರಾತ್ರಿಯ ಪಾಳಿ ಪದ್ಧತಿಯಲ್ಲಿ 5–6 ಮಂದಿ ಅರಣ್ಯ ರಕ್ಷಕರನ್ನು ನೇಮಿಸಲಾಗಿತ್ತು. 
ಶನಿವಾರ ಮುಂಜಾನೆ ನಾಲ್ಕರ ಸಮಯದಲ್ಲಿ ಚಿರತೆ ಸೆರೆಯಾಗಿದ್ದು, ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com