ತುಮಕೂರು: ಏಪ್ರಿಲ್ 18 ರಂದು ವಿವಾಹವಾಗಬೇಕಿದ್ದ ವೈದ್ಯನ ನಿಗೂಢ ಸಾವು

ಹಸೆಮಣೆ ಏರಬೇಕಿದ್ದ ವೈದ್ಯರೊಬ್ಬರು ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಕುವೆಂಪು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ತುಮಕೂರು: ಹಸೆಮಣೆ ಏರಬೇಕಿದ್ದ ವೈದ್ಯರೊಬ್ಬರು ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಕುವೆಂಪು ನಗರದಲ್ಲಿ ನಡೆದಿದೆ.
ಎಂ.ಎನ್ ಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಗಿರೀಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 
ಮಾನ್ವಿಯ ಎಂಎಸ್ಸಿ ಪದವೀಧರೆ ಜೊತೆ ಗಿರೀಶ್ ಗೆ ಬೆಂಗಳೂರಿನಲ್ಲಿ ಏಪ್ರಿಲ್ 18 ರಂದು ವಿವಾಹ ನಿಶ್ಚಯವಾಗಿತ್ತು.  ಕುವೆಂಪುನಗರದ ಮನೆಯಲ್ಲಿ ಗಿರೀಶ್ ತಮ್ಮ ಎಡಗೈ ಮಣಿಕಟ್ಟು ಕತ್ತರಿಸಿಕೊಂಡಿದ್ದಾರೆ. ಗಿರೀಶ್ ಮನೆಯಿಂದ ಪೊಲೀಸರು ಬಳಕೆ ಮಾಡಿದ ಔಷಧವೊಂದರ ಬಾಟಲ್ ಮತ್ತು ಸಿರೀಂಜ್ ಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.
ಮದುವೆಗಾಗಿ ಬಿದಿರಿನ ಬುಟ್ಟಿ ಖರೀದಿಸಿದ್ದ ಗಿರೀಶ್ ಲಗ್ನ ಪತ್ರಿಕೆ ಹಂಚಿ ನಂತರ ನನ್ನನ್ನು ಮನೆಗೆ ಡ್ರಾಪ್ ಮಾಡಿ ಹೊರಟಿದ್ದರು ಎಂದು ಗಿರೀಶ್ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಲ್ಯಾಬ್ ಟೆಕ್ನಿಶಿಯನ್ ಭಾಸ್ಕರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಗ ಬೆಂಗಳೂರಿನ ಮನೆಗೆ ಬಾರದಿದ್ದಾಗ ಗಾಬರಿಯಾದ ಗಿರೀಶ್ ತಾಯಿ ಗೌರಮ್ಮ ಭಾಸ್ಕರ್ ಗೆ ಕರೆ ಮಾಡಿ ಮಗನನ್ನು ನೋಡುವಂತೆ ಹೇಳಿದ್ದಾರೆ. ಈ ವೇಳೆ ಬಂದ ಭಾಸ್ಕರ್ ಮನೆಯ ಬೀಗ ಒಡೆದು ನೋಡಿದಾಗ ಗಿರೀಶ್ ಸಾವನ್ನಪ್ಪಿರುವುದು ತಿಳಿದು ಬಂದಿದೆ. 
ಗುರುವಾರ ನನಗೆ ಲಗ್ನ ಪತ್ರಿಕೆ ನೀಡಿ ರಜೆ ಕೋರಿದ್ದರು. ತಮ್ಮ ಡ್ಯೂಟಿ ಚಾರ್ಜ್ ಅನ್ನು ಮತ್ತೊಬ್ಬ ವೈದ್ಯರಿಗೆ ನೀಡಿದ್ದರು. ವಿಷಯ ಕೇಳಿ ನನಗೆ ಆಘಾತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗಸ್ವಾಮಿ ಹೇಳಿದ್ದಾರೆ.
ಯಾದಗಿರಿ ಮೂಲದ ನಿವೃತ್ತ ಬ್ಯಾಂಕ್ ಉದ್ಯೋಗಿಯಾದ ಚಂದ್ರಶೇಖರ್ ಎಂ. ಅವ್ವಾರಿ ಮತ್ತು ಗೌರಮ್ಮ ಅವರಿಗೆ ಗಿರೀಶ್ ಒಬ್ಬನೇ ಪುತ್ರ, ಮತ್ತು ಮೂವರು ಪುತ್ರಿಯರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com