ತುಮಕೂರು: ಡ್ರಗ್ ಸೇವನೆಯಿಂದ ವೈದ್ಯಾಧಿಕಾರಿ ಸಾವಿನ ಶಂಕೆ

ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ್ ಅವರ ಅನುಮಾನಾಸ್ಪದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು: ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ್ ಅವರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಶವಪರೀಕ್ಷೆ ನಡೆಸಿದ ವೈದ್ಯರು ಆಂಟಿಬಯಾಟಿಕ್ ಮತ್ತು ಅರಿವಳಿಕೆಯ ಔಷಧ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. 
ಗಿರೀಶ್ ಅಸ್ತಮಾ ರೋಗಿಯಾಗಿದ್ದು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದನು ಎಂದು ಅವರ ಪೋಷಕರಾದ ಗೌರಮ್ಮ ಮತ್ತು ಚಂದ್ರಶೇಖರ್ ಎಂ.ಅವರಿ ಗುಬ್ಬಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಹೇಳಿದ್ದಾರೆ.
ಸ್ಥಳೀಯ ವೈದ್ಯಾಧಿಕಾರಿ ಡಾ. ರುದ್ರಮೂರ್ತಿ ಶವಪರೀಕ್ಷೆ ನಡೆಸಿ ಗಿರೀಶ್ ಅವರು ನೋವಿಲ್ಲದ ಅನಸ್ತೇಶಿಯಾ ಪಡೆದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವರದಿ ನೀಡಿದ್ದರು.
 ಸೆಫ್ಟ್ರಿಯಾಕ್ಸಿನ್ ಆಂಟಿಬಯಾಟಿಕ್ ಗಿರೀಶ್ ಅವರ ಶವದ ಪಕ್ಕದಲ್ಲಿ ದೊರೆತಿದ್ದು ಇದನ್ನು ಬ್ಯಾಕ್ಟೀರಿಯಾ ಸೋಂಕಿಗೆ ಬಳಸಲಾಗುತ್ತದೆ. ಅದೊಂದೇ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಶವ ಕಳುಹಿಸಲಾಗಿದ್ದು ಅಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ರುದ್ರಮೂರ್ತಿ ಹೇಳುತ್ತಾರೆ.
ಎಂ.ಎನ್.ಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ್ ಮೊನ್ನೆ ಶನಿವಾರ ಅಪರಾಹ್ನ ಅನುಮಾನಾಸ್ಪದ ರೀತಿಯಲ್ಲಿ ಗುಬ್ಬಿಯ ಕುವೆಂಪು ನಗರದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮೃತಪಟ್ಟಿದ್ದರು.
ಇದೇ 18ರಂದು ಬೆಂಗಳೂರು ಮೂಲದ ಮಾನ್ವಿ ಎಂಬುವವರ ಜೊತೆ ಮದುವೆ ನಿಶ್ಚಯವಾಗಿತ್ತು.ಮದುವೆಗೆ ತಮ್ಮ ಸ್ನೇಹಿತರಿಗೆ,ಬಂಧುಗಳಿಗೆ ಆಹ್ವಾನ ಪತ್ರಿಕೆಯನ್ನೂ ಹಂಚುತ್ತಿದ್ದರು.
ಗಿರೀಶ್ ನ ಎಡ ಮಣಿಕಟ್ಟು ಮುರಿದ ಸ್ಥಿತಿಯಲ್ಲಿ ಮೊನ್ನೆ ಶನಿವಾರ ಗಿರೀಶ್ ತಮ್ಮ ಬೆಡ್ ನಲ್ಲಿ ಮಲಗಿದ್ದರು. ಪೊಲೀಸರು ಸ್ಥಳದಿಂದ ಎರಡು ಸಿರಿಂಜ್ ಮತ್ತು ಬಳಸಿದ ಔಷಧ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com