ರೌಡಿ ನಾಗರಾಜ್ ಅಲಿಯಾಸ್ ಬಾಂಬ್ ನಾಗ
ರಾಜ್ಯ
ಬೆಂಗಳೂರು: ರೌಡಿ ಬಾಂಬ್ ನಾಗನ ಸಹಚರರು ಪೊಲೀಸರ ವಶಕ್ಕೆ
ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ಶೀಟರ್ ಬಾಂಬ್ ನಾಗನ ಮನೆಯಲ್ಲಿ ಕೋಟಿ ಕೋಟಿ ರು. ನಿಷೇಧಿತ ಹಣ ಪತ್ತೆಯಾದ ಬೆನ್ನಲ್ಲೇ ಪೊಲೀಸರು ನಾಗನ ...
ಬೆಂಗಳೂರು: ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ಶೀಟರ್ ಬಾಂಬ್ ನಾಗನ ಮನೆಯಲ್ಲಿ ಕೋಟಿ ಕೋಟಿ ರು. ನಿಷೇಧಿತ ಹಣ ಪತ್ತೆಯಾದ ಬೆನ್ನಲ್ಲೇ ಪೊಲೀಸರು ನಾಗನ ಮೂವರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶುಕ್ರವಾರ ಶ್ರೀರಾಮಪುರದ ಬಾಂಬ್ ನಾಗಮ ಮನೆಯಲ್ಲಿ ಹಣ ವಶಕ್ಕೆ ಪಡೆದುಕೊಂಡ ಪೊಲೀಸರು ಶನಿವಾರ ಆತನ ಗ್ಯಾಂಗ್ ನ ಮಣಿ ಮತ್ತು ಅಪ್ಪಿ ಎಂಬುವರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಯಾರೋಬ್ಬರನ್ನು ಬಂಧಿಸಿಲ್ಲ, ಅವನ ಗ್ಯಾಂಗ್ ಗೆ ಸೇರಿದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ, ನಾವು ನಾಗನಿಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ನಡೆಸಿದವು,ಮತ್ತು ಈಗ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ನಾಗರಾಜನ ಇಬ್ಬರು ಗಂಡು ಮಕ್ಕಳು ಕೂಡ ಆರೋಪಿಗಳಾಗಿದ್ದಾರೆ. ಆದರೆ ಅವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ