ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಜ್ಯಕ್ಕೆ ಭೂಕಂಪ ಹೊಸತಲ್ಲ: 7 ವರ್ಷಗಳಲ್ಲಿ 43 ಬಾರಿ ನಡುಗಿದೆ ಭೂಮಿ

ಮಂಗಳವಾರ ಬೆಳಗ್ಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ, ಆದರೆ ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 43 ಬಾರಿ ...
ಬೆಂಗಳೂರು: ಮಂಗಳವಾರ ಬೆಳಗ್ಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ, ಆದರೆ ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 43 ಬಾರಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 1.5 ರಷ್ಟು ತೀವ್ರತೆ ದಾಖಲಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ರಾಜ್ಯಾದ್ಯಂತ ಸುಮಾರು ಭೂಕಂಪ ತೀವ್ರತೆ ಅಳತೆಗಾಗಿ ಸುಮಾರು 14ಭೂ ಮಾಪಕಗಳನ್ನು ಅಳವಡಿಸಿದೆ.
ರಿಕ್ಟರ್ ಮಾಪಕದಲ್ಲಿ 1.5ರಿಂದ 3.6 ತೀವ್ರತೆಯ 43ಭೂಕಂಪ ಆಗಿರುವ ಬಗ್ಗೆ ನಮ್ಮಲ್ಲಿ ದಾಖಲೆಯಿದೆ, ಕಡಿಮೆ ಪ್ರಮಾಣದಲ್ಲಿ ಸಂಭವಿಸಿದ ಹಲವು ಭೂಕಂಪಗಳನ್ನು ಅಳತೆ ಮಾಡಲಾಗುವುದಿಲ್ಲ, ಹೀಗಾಗಿ ಅಂಥ ಭೂಕಂಪಗಳು ವರದಿಯಾಗುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂಕಂಪವಾಗಿದೆ, ರಾಜ್ಯದಲ್ಲಿ ಸಂಭವಿಸಿದ ಒಟ್ಟು 43 ಭೂಕಂಪಗಳ ಪೈಕಿ 25 ಕಂಪನಗಳು ಈ ಜಿಲ್ಲೆಯಲ್ಲೆ ಸಂಭವಿಸಿವೆ, ಅದರಂತೆ ಚಿತ್ರದುರ್ಗದಲ್ಲಿ 8 ಬಾರಿ ಭೂಮಿ ಕಂಪಿಸಿದೆ, ಆದರೆ ಯಾವುದೇ ಹಾನಿ ಸಂಭವಿಸಿಲ್ಲ,
ಭೂಕಂಪನಕ್ಕೆ ಹಲವು ಕಾರಣಗಳಿವೆ, ಕೆಲವು ನೈಸರ್ಗಿಕ ಮತ್ತು ಮಾನವ ನಿರ್ಮಿತಕವಾದದ್ದಾಗಿವೆ, ಬೋರವೆಲ್ ಕೊರೆತ, ಸುರಂಗ ನಿರ್ಮಾಣ, ಕಲ್ಲುಗಣಿಗಾರಿಕೆಯಿಂದ ಕೆಲ ಬಾರಿ ಭೂಕಂಪನವಾಗುತ್ತದೆ, ಭೂಮಿಯ ಮೇಲಿಂದ 1ಸಾವಿರದಿಂದ 2ಸಾವಿರ ಅಡಿ ಕೆಳಗೆ ಹೋದಾಗ ಮಾನವ ನಿರ್ಮಿತ ಭೂಕಂಪನವಾಗುತ್ತದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ನೈಸರ್ಗಿಕವಾಗಿ ಸಂಭವಿಸುವ ಭೂಕಂಪನಗಳು 2ಸಾವಿರ ಅಡಿ ಕೆಳಗಡೆ ಅಂದರೆ ಸುಮಾರು 100 ಮೀಟರ್ ಆಳದಲ್ಲಿ ಸಂಭವಿಸುವಂತದ್ದಾಗಿದೆ. ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಣ್ಣದ ಕಲ್ಲುಗಳು ಕಂಡು ಬರುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಾಗ ಈ ಕಲ್ಲುಗಳು ಕೊಳೆತು ನಾಶವಾಗುತ್ತವೆ , ಇದು ಕೂಡ ಭೂಕಂಪನವಾಗಲು ಒಂದು ಕಾರಣ ಎಂದು ಹೇಳಿದ್ದಾರೆ. ಭೂಮಿಯ ಮೇಲ್ಮೈ ಒತ್ತಡದಿಂದ ಕೆಲವು ಬಾರಿ ಭೂಕಂಪನ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಭೂಕಂಪನಕ್ಕೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೋರ್ ವೆಲ್ ಕೊರೆಯದಂತೆ ಭೂಗರ್ಭಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ, ಅಂತರ್ಜಲ ಕೂಡ ಭೂಕಂಪನಕ್ಕೆ ಕಾರಣವಾಗುತ್ತದೆ ಎಂದು ಹಿರಿಯ ಭೂಗೋಳ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 1ಸಾವಿರ ಅಡಿಗಿಂತ ಕೆಳಗೆ ಬೋರ್ ವೆಲ್ ತೋಡುವುದು ಬಹಳ ಅಪಾಯಕಾರಿ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com