ಬಾರ್ ಮಾಲೀಕನ ಬಳಿ ಹಣ ಕೀಳಲು ಸುದ್ದಿ ವಾಹಿನಿ ವರದಿಗಾರನ ಯತ್ನ; ಕೇಸು ದಾಖಲು

ನ್ಯೂಸ್ ಚಾನೆಲ್ ನ ಸಿಇಒ ಬಿಲ್ಡರ್ ಹಣ ಪಡೆಯಲು ಯತ್ನಿಸುವಾಗ ಸಿಕ್ಕಿಬಿದ್ದ ಕೇವಲ ನಾಲ್ಕು ದಿನಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನ್ಯೂಸ್ ಚಾನೆಲ್ ನ ಸಿಇಒ ಬಿಲ್ಡರ್ ಒಬ್ಬರಿಂದ ಹಣ ಪಡೆಯಲು ಯತ್ನಿಸುವಾಗ ಸಿಕ್ಕಿಬಿದ್ದ ಕೇವಲ ನಾಲ್ಕು ದಿನಗಳ ನಂತರ ಅದೇ ಚಾನೆಲ್ ನ ಸುದ್ದಿಗಾರ ಮತ್ತು ಅವರ ನಾಲ್ವರು ಸಹಚರರು ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ವೊಂದರ ಮಾಲಿಕರಿಂದ 1 ಕೋಟಿ ರೂಪಾಯಿ ಹಣ ಲಂಚ ಸ್ವೀಕರಿಸಲು ಯತ್ನಿಸಿದ ಘಟನೆ ನಡೆದಿದೆ.

ಸುದ್ದಿಗಾರ ಪ್ರದೀಪ್ ಮತ್ತು ಅವರ ಕ್ಯಾಮರಾಮೆನ್ ಹಾಗೂ ಇನ್ನಿತರ ಮೂವರ ಜೊತೆ ಮೊನ್ನೆ 18ರಂದು ಕೋರಮಂಗಲದ ಬಾರ್ ವೊಂದಕ್ಕೆ ಹೋಗಿ ಮದ್ಯ ಸೇವಿಸಿದರು. ಬಾರ್ ಗರ್ಲ್ಸ್ ಮತ್ತು ಇತರ ಮಹಿಳಾ ಸಿಬ್ಬಂದಿಗಳ ವಿಡಿಯೋ ಮಾಡಲಾರಂಭಿಸಿದರು. ಸ್ವಲ್ಪ ಹೊತ್ತಿನ ನಂತರ, ಬಾರ್ ನಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ವಿಡಿಯೋವನ್ನು ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆಯೊಡ್ಡಿದರು. ತಮ್ಮ ಗುರುತು ಚೀಟಿಯನ್ನು ತೋರಿಸಿ 1 ಕೋಟಿ ರೂಪಾಯಿ ಬೆದರಿಕೆಯೊಡ್ಡಿದರು.

ಬಾರ್ ನ ಸಿಬ್ಬಂದಿ ತಮ್ಮ ಮಾಲೀಕರಿಗೆ ವಿಷಯ ತಿಳಿಸಿದರು. ಆಗ ಮಾಲೀಕ ಮುನಿರಾಜು ಸ್ಥಳಕ್ಕೆ ಕೂಡಲೇ ಧಾವಿಸಿ ಬಂದು ಸುದ್ದಿಗಾರ ಮತ್ತು ಅವರ ಸಹಾಯಕರಿಗೆ ಹೊಡೆದರು. ಕೋರಮಂಗಲ ಪೊಲೀಸರಿಗೆ ದೂರು ನೀಡಲೆಂದು ಬಾರ್ ನ ಮಾಲೀಕರನ್ನು ಕರೆದುಕೊಂಡು ಪ್ರದೀಪ್ ಮತ್ತು ಅವರ ತಂಡ ಹೋದರು. ಆದರೆ ಮಾರ್ಗ ಮಧ್ಯದಲ್ಲಿಯೇ ತಪ್ಪಿಸಿಕೊಂಡು ಓಡಿಹೋದರು. ಮುನಿರಾಜು ಅವರು ಪ್ರದೀಪ್ ಮತ್ತು ಅವರ ಸ್ನೇಹಿತರ ವಿರುದ್ಧ ಕೇಸು ದಾಖಲಿಸಿದ್ದು ತಲೆಮರೆಸಿಕೊಂಡ ಚಾನೆಲ್ ಸಿಬ್ಬಂದಿ ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com