ಕೊಳವೆ ಬಾವಿಗೆ ಬಿದ್ದ ಕಾವೇರಿ: ಬೋರ್ ವೆಲ್ ಕೊರೆಸಿದ್ದ ಜಮೀನು ಮಾಲೀಕ ಪರಾರಿ!

ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ 6 ವರ್ಷದ ಕಾವೇರಿಯನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರೆದಿರುವಂತೆಯೇ ಬಂಧನ ಭೀತಿಯಿಂದಾಗಿ ಜಮೀನು ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ಬೆಳಗಾವಿಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ 6 ವರ್ಷದ ಕಾವೇರಿಯನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರೆದಿರುವಂತೆಯೇ ಬಂಧನ  ಭೀತಿಯಿಂದಾಗಿ ಜಮೀನು ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿಮಾಧ್ಯಮವೊಂದು ವರದಿ ಮಾಡಿರುವಂತೆ ಕೊಳವೆ ಬಾವಿ ಕೊರೆಸಿದ್ದ ಜಮೀನು ಮಾಲೀಕ ಶಂಕರಪ್ಪ ಹಿಪ್ಪರಗಿ ನಿನ್ನೆ ಸ್ಥಳದಿಂದ ಕಾಲ್ಕಿತ್ತಿದ್ದು, ಬಂಧನ ಭೀತಿಯಿಂದಾಗಿಯೇ ಆತ ಪರಾರಿಯಾಗಿದ್ದಾನೆ ಎಂದು  ಹೇಳಲಾಗುತ್ತಿದೆ. ಇನ್ನು ಜಮೀನಲ್ಲಿಯೇ ಇರುವ ಆತನ ಮನೆ ಬಿಟ್ಟು ಹೋಗಿದ್ದು, ಕೊಟ್ಟಿಗೆಯಲ್ಲಿರುವ ಆತನ ದನ ಕರುಗಳು ಮೇವಿಲ್ಲದೆ ಪರಾದಾಡುತ್ತಿವೆ. ಇನ್ನು ಪರಾರಿಯಾಗಿರುವ ಶಂಕರಪ್ಪ ಬಂಧನಕ್ಕಾಗಿ ಪೊಲೀಸರು ಕ್ರಮ  ಕೈಗೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸತತ 36 ಗಂಟೆಗಳ  ಬಳಿಕವೂ ಮುಂದುವರೆದ ಕಾರ್ಯಾಚರಣೆ
ಇನ್ನು ಬಾಲಕಿ ಕೊಳವೆ ಬಾವಿಗೆ ಬಿದ್ದು 36 ಗಂಟೆಗಳೇ ಕಳೆದು ಹೋಗಿದ್ದರೂ, ಆಕೆಯ ರಕ್ಷಣೆಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮಾತ್ರ ಇನ್ನೂ ನಿಂತಿಲ್ಲ. ಬಾಲಕಿ ಬಿದ್ದ ಕೊಳವೆ ಬಾವಿ ಸಮೀಪದಲ್ಲೇ ಎನ್ ಡಿಆರ್ ಎಫ್  ಸಿಬ್ಬಂದಿ ಬೋರ್ ವೆಲ್ ಕೊರೆದಿದ್ದು, ಅಲ್ಲಿಂದ ಸಮಾನಂತರವಾಗಿ ಮತ್ತೆರಡು ಅಡಿಗಳ ಕೆಳಗೆ ಗುಂಡಿ ತೋಡಿ ಬಾಲಕಿಯನ್ನು ಎಳೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಏತನ್ಮಧ್ಯೆ ಇಂದು ಬೆಳಗ್ಗೆ ಮತ್ತೆ ಕೊಳೆವೆ ಬಾವಿಗೆ  ಸಿಸಿಟಿವಿ ಕ್ಯಾಮೆರಾವನ್ನು ಇಳಿ ಬಿಟ್ಟು ಬಾಲಕಿಯ ಚಲನವಲನ ಗಮನಿಸಲಾಯಿತು. ಆದರೆ ನಿನ್ನೆಯಂತೆಯೇ ಕೊಳವೆ ಬಾವಿಯಲ್ಲಿ ಬಾಲಕಿಯ ಕೈ ಮಾತ್ರ ಕಾಣಿಸುತ್ತಿದ್ದು, ಕೈಯಲ್ಲಿ ಯಾವುದೇ ಚಲನೆ ಇಲ್ಲ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಕಾವೇರಿ ಉಳಿವ ಸಾಧ್ಯತೆ ಕ್ಷೀಣ
ಇನ್ನು ತಜ್ಞರು ಅಭಿಪ್ರಾಯಪಟ್ಟಿರುವಂತೆ ಸುಮಾರು 22 ಅಡಿ ಆಳದಲ್ಲಿ ಸಿಲುಕಿರುವ ಬಾಲಕಿ ಕಾವೇರಿ ಉಳಿವ ಸಾಧ್ಯತೆ ಕ್ಷೀಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಲಕಿಗೆ ಆಮ್ಲಜನಕದ ಕೊರತೆಯುಂಟಾಗಿರಬಹುದು ಎಂದು  ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com