ಬೈಕ್ ಕೀ ನುಂಗಿದ್ದ ವ್ಯಕ್ತಿ: ಶಸ್ತ್ರ ಚಿಕಿತ್ಸೆಯಿಲ್ಲದೇ ಹೊರತೆಗೆದ ಬೆಂಗಳೂರು ವೈದ್ಯರು

ಆಕಸ್ಮಿಕವಾಗಿ ಬೈಕ್ ಕೀ ನುಂಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು ಯಶಸ್ವಿಯಾಗಿ ತೆಗೆದಿದ್ದಾರೆ....
ಬೈಕ್ ಕೀ ನುಂಗಿದ್ದ ಸಬಾ ರೆಡ್ಡಿ
ಬೈಕ್ ಕೀ ನುಂಗಿದ್ದ ಸಬಾ ರೆಡ್ಡಿ
ಬೆಂಗಳೂರು: ಆಕಸ್ಮಿಕವಾಗಿ ಬೈಕ್ ಕೀ ನುಂಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು ಯಶಸ್ವಿಯಾಗಿ ತೆಗೆದಿದ್ದಾರೆ.
ಕೆ.ಆರ್ ಪುರಂ ನ ಸಬಾ ರೆಡ್ಡಿ ಎರಡು ವಾರಗಳ ಹಿಂದೆ ಬೈಕ್ ಕೀಯಲ್ಲಿದ್ದ ರಿಂಗ್ ತೆಗೆಯಲು ಹಲ್ಲಿನಿಂದ ಪ್ರಯತ್ನಿಸುತ್ತಿದ್ದರು. ಈ ವೇಳೆ ಆತನಿಗೆ ಕೆಮ್ಮು ಬಂತು, ಬಾಯಲ್ಲಿ ಕೀ ಇರುವುದು ನನಗೆ ತಿಳಿದಿತ್ತು, ಈ ವೇಳೆ ನಾನು ಕೆಮ್ಮಿದಾಗ ಕೀ ನುಂಗಿಬಿಟ್ಟೆ, ಆದರೆ ನನಗೆ ಯಾವುದೇ ನೋವಿನ ಅನುಭವವಾಗಲಿಲ್ಲ, ನಾನು ಸಹಜವಾಗಿಯೇ ಇದ್ದೆ, ಸ್ವಾಭಾವಿಕವಾಗಿಯೇ ಕೀ ಹೊರ ಬರಲಿ ಎಂದು ಆತ ಕಾಯುತ್ತಿದ್ದ.
ಆದರೆ ಅದು ಬಾರದ ಕಾರಣ ಹೊರತೆಗೆಸಲು ನಾನು ನಿರ್ಧರಿಸಿದೆ, 1 ಗಂಟೆ ಗೂ ಮುನ್ನ ವೈದ್ಯರು ಕೀಯನ್ನು ಹೊರತೆಗೆದರು. ಅದಕ್ಕೆ 4 ಸಾವಿರ ರು ಖರ್ಚಾಯಿತು. ಕೀ ಹೊರತೆಗೆದ ನಂತರ ನಾನು ಯಾವುದೇ ತೊಂದರೆ ಇಲ್ಲದೇ ಊಟ ಮಾಡಿದೆ ಎಂದು ಆತ ವಿವರಿಸಿದ್ದಾನೆ.
ಈ ಹಿಂದೆ ಅನೇಕ ಮಕ್ಕಳು ನಾಣ್ಯಗಳು, ಪಿನ್ ಗಳನ್ನು ನುಂಗಿದ್ದ ಕೇಸ್ ಗಳನ್ನು ನೋಡಿದ್ದೆ, ಆದರೆ ಇದೇ ಮೊದಲು ಕೀ ನುಂಗಿದ ಕೇಸ್ ನೋಡಿದೆ, ಆತನ ಅದೃಷ್ಟಕ್ಕೆ ಕೀ ಅನ್ನನಾಳವನ್ನು ಹಾನಿ ಮಾಡಿರಲಿಲ್ಲ, ನುಂಗಿದ ಕೀ ಹೋಗಿ ಸಣ್ಣ ಕರುಳಿನ ಒಳಗೆ ಹೋಗಿದ್ದರೇ ಅಲ್ಲಿ ಗಾಯವಾಗುತ್ತಿತ್ತು, ಆದರೆ ಕೀ ಹೊಟ್ಟೆ ಸೇರಿತ್ತು, ಗಂಟಲಿಗೆ ಲೋಕಲ್ ಅನಸ್ತೇಶಿ ನೀಡಿ 25 ನಿಮಿಷಗಳಲ್ಲಿ ಅದನ್ನೂ ಹೊರತೆಗೆದವು ಎಂದು ಕೆ,ಆರ್ ಪುರಂ ನ ಗ್ಯಾಸ್ಟ್ರೋಎಂಟರಾಲಜಿಸ್ಟ್ ಪ್ರವೀಣ್ ಕುಮಾರ್ ವಿವರಿಸಿದ್ದಾರೆ.
ರೆಡ್ಡಿ ಅವರಿಗೆ ಯಾವುದೇ ಶಸ್ತ್ರಕ್ರಿಯೆ ನಡೆಸದೇ ಎಂಡೋಸ್ಕೋಪಿ ಮೂಲಕ ಕೀ ಹೊರ ತೆಗೆದಿದ್ದಾರೆ, ಆದರೆ ಕೀಯಲ್ಲಿದ್ದ ರಿಂಗ್ ತುಕ್ಕು ಹಿಡಿದಿದ್ದರೇ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯ ಡಾ. ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com