ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಹಣ್ಣು, ಹೂವಿನ ಬೆಲೆ!

ವರಮಹಾಲಕ್ಷ್ಮಿ ಹಹ್ಹಬ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಮತ್ತೊಮ್ಮೆ ಗಗನಕ್ಕೇರಿದೆ. ಹೂವು-ಹಣ್ಣುಗಳ ಬೆಲೆ ಏರಿಕೆಯಾಗಿದ್ದರೂ..
ಹಬ್ಬಕ್ಕಾಗಿ ಹೂವು ಖರೀದಿಸುತ್ತಿರುವ ಗ್ರಾಹಕರು
ಹಬ್ಬಕ್ಕಾಗಿ ಹೂವು ಖರೀದಿಸುತ್ತಿರುವ ಗ್ರಾಹಕರು
ಬೆಂಗಳೂರು: ವರಮಹಾಲಕ್ಷ್ಮಿ ಹಹ್ಹಬ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಮತ್ತೊಮ್ಮೆ ಗಗನಕ್ಕೇರಿದೆ.
ಹೂವು-ಹಣ್ಣುಗಳ ಬೆಲೆ ಏರಿಕೆಯಾಗಿದ್ದರು, ಸಿಲಿಕಾನ್ ಸಿಟಿ ಜನರು ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ. ಹಬ್ಬಕ್ಕಾಗಿ ಸಾವಿರಾರು ಜನ ಸಾಮಾಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು.
ಪ್ರಮುಖ ಮಾರುಕಟ್ಟೆಗಳಿರುವ ರಸ್ತೆಗಳಲ್ಲಿ ಹೆಚ್ಚಿನ ಸಂದಣಿಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊನೆಯ ಕ್ಷಣದ ಶಾಪಿಂಗ್ ನಿಂದಾಗಿ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಭಾರೀ ಜಾಮ್ ಉಂಟಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆ ದುಪ್ಪಟ್ಟಾಗಿದೆ. ಸಾಮಾನ್ಯ ದಿನಗಳಲ್ಲಿ ಸೇವಂತಿಗೆ ಹೂವಿನ ಬೆಲೆ ಕೆಜಿಗೆ 150 ರು. ಇರುತ್ತದೆ, ಆದರೆ ಹಬ್ಬವಾದ್ದರಿಂದ ಏಕಾಏಕಿ 250 ರೂ.ಗೆ ಏರಿದೆ, ಮಲ್ಲಿಗೆ ಹೂವಿನ ಬೆಲೆ 300 ರು ಇದ್ದದ್ದು, 1500 ರು ಏರಿಕೆಯಾಗಿದೆ. ಕಮಲದ ಹೂವಿನ ಬೆಲೆ ಕೂಡ ಏರಿಕೆಯಾಗಿದೆ ಎಂದು ರಾಧಿಕಾ ಗೌಡ ಎಂಬ ಗೃಹಿಣಿ ಹೇಳಿದ್ದಾರೆ.
ಈ ಹಬ್ಬಕ್ಕೆ ಕಮಲದ ಹೂವೇ ಶ್ರೇಷ್ಠ. ಒಂದು ಜೊತೆ ಕಮಲದ ಹೂವಿಗೆ 150 ರು ಆಗಿದೆ, ಇದು ,ಸಾಮಾನ್ಯ ವ್ಯಕ್ತಿಗೆ ಭರಿಸಲಾಗದು ಎಂದು ನಾಗೇಶ್ ಹೆಗಡೆ ಎಂಬ ಮತ್ತೊಬ್ಬ ಗ್ರಾಹಕ ಅಭಿಪ್ರಾಯ ಪಟ್ಟಿದ್ದಾರೆ.
ಆಪಲ್ ಮತ್ತು ದಾಳಿಂಬೆ ಹಣ್ಣುಗಳ ದರದಲ್ಲಿ ಭಾರೀ ಏರಿಕೆಯಾಗಿದೆ. ಆಪಲ್- ಕೆಜಿಗೆ 180, ದಾಳಿಂಬೆ-170, ದ್ರಾಕ್ಷಿ- 200ಗೆ ಏರಿದೆ. ಹಬ್ಬದ ದಿನಗಳಲ್ಲಿ ಬೆಲೆ ಏರಿಕೆ ಸಾಮಾನ್ಯ ಎಂದು ಮಾರಾಟಗಾರರ ಅಭಿಪ್ರಾಯವಾಗಿದೆ, 
ಮಳೆಯ ಕಾರಣದಿಂದಾಗಿ ಹಣ್ಣುಗಳಿಗಾ ಹಾನಿಯಾಗಿದೆ ಹೀಗಾಗಿ ಬೆಲೆ ಏರಿಕೆಯಾಗಿದೆ ಕಳೆದ ವಾರ ಕೆಜಿಗೆ 100 ರ ಗಡಿ ದಾಟಿದ್ದ ಟಮೋಟೋ ಬೆಲೆ 40 ರು ಗೆ ಇಳಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com