ಕಳೆದ ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್, ಬಡ್ತಿ ಮೀಸಲಾತಿಯಿಂದಾಗಿ ಇತರೆ ವರ್ಗದರಿಗೆ ಅನ್ಯಾಯ ಆಗಿದ್ದು, ಅನ್ಯಾಯ ಸರಿಪಡಿಸಿ ಎಂದು ತೀರ್ಪು ನೀಡಿತ್ತು. ಹಿಂದುಳಿದಿರುವಿಕೆ ಮಾನದಂಡ ಹಾಗೂ ಕಾರ್ಯದಕ್ಷತೆ ಮೇಲಿನ ಪರಿಣಾಮದ ಕುರಿತು ಮಾಹಿತಿ ನೀಡದ ರಾಜ್ಯ ಸರ್ಕಾರದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಪರಿಷ್ಕೃತ ಸೇವಾ ಜೇಷ್ಠತೆ ಪಟ್ಟಿ ಸಿದ್ಧಪಡಿಸಿ ನಂತರದ ಮೂರು ತಿಂಗಳಲ್ಲಿ ಬಡ್ತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಗಡುವು ನೀಡಿತ್ತು. ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 9 ರೊಳಗೆ ತೀರ್ಪು ಪಾಲನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಇದರ ನಡುವೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದೆ. ಆ ಅರ್ಜಿ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಗಡುವಿನ ಒಳಗೆ ವಿಚಾರ ಇತ್ಯರ್ಥಕ್ಕೆ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿದೆ.