ಬೆಂಗಳೂರಿನಲ್ಲಿ ಅವ್ಯಾಹತ ಮಳೆ: ಈ ಲೇ ಔಟ್ ನಿವಾಸಿಗಳಿಗೆ ಅನುಗ್ರಹವೇ ಇಲ್ಲ

1947, ಆಗಸ್ಟ್ 15ರಂದು ಜನರು ನಿದ್ದೆಯಿಲ್ಲದ ರಾತ್ರಿಯನ್ನು ಕಳೆದು ಸ್ವಾತಂತ್ರ್ಯದ ಸಂಭ್ರಮವನ್ನಾಚರಿಸಿದ್ದರು....
ಅನುಗ್ರಹ ಲೇ ಔಟ್ ನಲ್ಲಿ ಕೊಚ್ಚೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡ ಗೂಡ್ಸ್ ವಾಹನ
ಅನುಗ್ರಹ ಲೇ ಔಟ್ ನಲ್ಲಿ ಕೊಚ್ಚೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡ ಗೂಡ್ಸ್ ವಾಹನ
ಬೆಂಗಳೂರು: 1947, ಆಗಸ್ಟ್ 15ರಂದು ಜನರು ನಿದ್ದೆಯಿಲ್ಲದ ರಾತ್ರಿಯನ್ನು ಕಳೆದು ಸ್ವಾತಂತ್ರ್ಯದ ಸಂಭ್ರಮವನ್ನಾಚರಿಸಿದ್ದರು. ಅದಾಗಿ 70 ವರ್ಷಗಳು ಕಳೆದ ನಂತರ ಮೊನ್ನೆ ಸೋಮವಾರ ಕಳೆದು ರಾತ್ರಿ ಬೆಂಗಳೂರು ನಗರದ ಬಹುತೇಕ ಕಡೆಗಳಲ್ಲಿ ನಾಗರಿಕರು ಅದೇ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಆದರೆ ಈ ಬಾರಿ ಖುಷಿಯ ವಿಚಾರಕ್ಕಲ್ಲ. ಬದಲಾಗಿ ಅವ್ಯಾಹತ ಮಳೆಯಿಂದ ಮನೆಯೊಳಗೆಲ್ಲಾ ನೀರು ನುಗ್ಗಿ ಜನರನ್ನು ಕಂಗೆಡಿಸಿತ್ತು.
ಬೆಂಗಳೂರಿನ ಅನುಗ್ರಹ ಲೇ ಔಟ್ ನ ನಿವಾಸಿಗಳಿಗೆ ಮೊನ್ನೆ ರಾತ್ರಿ ಮತ್ತು ನಿನ್ನೆ ನಸುಕಿನ ಜಾವ ನಿಜಕ್ಕೂ ಕರಾಳವಾಗಿತ್ತು. ಈ ವರ್ಷ ಅನುಗ್ರಹ ಲೇ ಔಟ್ ನ ಅಭಿವೃದ್ಧಿ ಸಂಘದ ಅಧ್ಯಕ್ಷರು ಇಲ್ಲದೆ ನಾವು ತ್ರಿವರ್ಣ ಧ್ವಜವನ್ನು ಹಾರಿಸಿದೆವು ಎನ್ನುತ್ತಾರೆ ಹಿರಿಯ ನಾಗರಿಕರಾದ ಆರಾಧ್ಯ. ಅಧ್ಯಕ್ಷರ ಮನೆಗೆ ನೀರು ನುಗ್ಗಿ ತೊಂದರೆಯಾಗಿತ್ತು, ಅವರು ಧ್ವಜ ಹಾರಿಸಲು ಹೇಗೆ ಬರುತ್ತಾರೆ. ಅವರ ಮನೆಯೊಳಗೆ ಮೂರು ಅಡಿಗಳವರೆಗೆ ನೀರು ನುಗ್ಗಿತ್ತು. ಗೃಹ ಬಂಧನದ ಪರಿಸ್ಥಿತಿ ಅವರಿಗುಂಟಾಗಿತ್ತು ಎನ್ನುತ್ತಾರೆ.
ಅನುಗ್ರಹ ಲೇ ಔಟ್ ನಲ್ಲಿ ಸುಮಾರು 80 ಮನೆಗಳಿದ್ದು, ಪ್ರತಿ ಸಾರಿ ಮಳೆ ಬಂದಾಗಲೂ ಇಲ್ಲಿ ಪರಿಸ್ಥಿತಿ ಹದಗೆಡುತ್ತದೆ. 
ಸೇತುಮಾಧವ ಎಂಬ ಮತ್ತೊಬ್ಬ ನಾಗರಿಕ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಳೆ ಸುರಿಯಲು ಆರಂಭವಾಯಿತು. ಬಿಬಿಎಂಪಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಕರೆಯಲು ಪ್ರಯತ್ನಿಸುತ್ತಿದ್ದೆವು. ಕೌನ್ಸಿಲರ್ ಮತ್ತು ಶಾಸಕರನ್ನು ಕೂಡ ಸಂಪರ್ಕಿಸಲು ಪ್ರಯತ್ನಪಟ್ಟೆವು. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ಬೆಳಗ್ಗೆ ಅಗ್ನಿ ಶಾಮಕ ಸಿಬ್ಬಂದಿ ನೀರು ತೆಗೆಯಲು ಬಂದರು. ಮನೆಯಲ್ಲಿ ಕರೆಂಟು ಕೂಡ ಇಲ್ಲ ಎನ್ನುತ್ತಾರೆ.
ಇಲ್ಲಿನ ನಿವಾಸಿ ಹಾಗೂ ಐಟಿ ವೃತ್ತಿಪರ ಪನ್ನೀರ್ ಸೆಲ್ವಂ, ಪ್ರತಿ ಬಾರಿ ಭಾರೀ ಮಳೆ ಬಿದ್ದಾಗ ಪಾರ್ಕಿಂಗ್ ಪ್ರದೇಶಕ್ಕೆ ನೀರು ತುಂಬಿ ಹರಿಯುತ್ತದೆ. ಅದು ಬೇಸ್ ಮೆಂಟ್ ಲ್ಲಿ ಇರುವುದು. ಈ ಕಾಂಪ್ಲೆಕ್ಸ್ ನಲ್ಲಿ ಸುಮಾರು 20 ಮನೆಗಳಿದ್ದು ಪ್ರತಿ ಬಾರಿಯೂ ನಿಂತ ನೀರು ತೆಗೆಯಲು ಖಾಸಗಿ ಸಂಸ್ಥೆಯನ್ನು ಕರೆಯಬೇಕಾಗುತ್ತದೆ ಎನ್ನುತ್ತಾರೆ.
ಕೇವಲ ನೀರು ನುಗ್ಗುವ ಬಗ್ಗೆ ಮಾತ್ರ ನಿವಾಸಿಗಳು ಗಾಬರಿಯಾಗಿಲ್ಲ. ಅದರ ಜೊತೆಗೆ ಹಾವುಗಳು ಕೂಡ ಬರುತ್ತವೆ. ಹಾವುಗಳು ಕೂಡ ನೀರಿನೊಂದಿಗೆ ನಮ್ಮ ಮನೆಗೆ ನುಗ್ಗಿವೆ. ಹಾವು ಹಿಡಿಯುವವರನ್ನು ಕರೆಯಬೇಕಾಗಿದೆ ಎನ್ನುತ್ತಾರೆ ಬಿಳೆಕಹಳ್ಳಿಯ ನಿವಾಸಿ ಶ್ರೀಕಾಂತ್. ಮಿಶ್ರಾ ಎಂಬ ಮತ್ತೊಬ್ಬ ನಿವಾಸಿ, ನಾವು ಮೂರನೇ ಮಹಡಿಯಲ್ಲಿದ್ದರೂ ಕೂಡ ನಮ್ಮ ವಾಹನ ಕೆಳಗಡೆ ಪಾರ್ಕಿಂಗ್ ನಲ್ಲಿ ಇದೆ. ಬೆಳಗ್ಗೆ ನಾವು ರಸ್ತೆಯಲ್ಲಿ ವಾಹನ ನಿಲ್ಲಿಸಿದೆವು. ಕಳೆದ ಬಾರಿ ನೀರು ನುಗ್ಗಿ ವಾಹನ ಹಾಳಾಗಿತ್ತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com