ಬೆಂಗಳೂರು: ತರಗತಿಯಲ್ಲಿ ಶಿಕ್ಷಕಿಗೆ ಬೆಂಕಿ ಹಚ್ಚಿದ ಸ್ನೇಹಿತ, ಸಾವು ಬದುಕಿನ ನಡುವೆ ಹೋರಾಟ

ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅವರ ಸ್ನೇಹಿತ ಬೆಂಕಿ ಹಚ್ಚಿ ಇದೀಗ ಶಿಕ್ಷಕಿ ಸಾವು....
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಬೆಂಗಳೂರು: ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅವರ ಸ್ನೇಹಿತ ಬೆಂಕಿ ಹಚ್ಚಿ ಇದೀಗ ಶಿಕ್ಷಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶಂಬೈಹನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. 
ಮೊನ್ನೆ ಬುಧವಾರ ಮಧ್ಯಾಹ್ನ ನಂತರ 50 ವರ್ಷದ ಶಿಕ್ಷಕಿ ಸುನಂದಾ ಅವರಿಗೆ ಆಕೆಯ ಸ್ನೇಹಿತೆ ರೇಣುಕಾರಾಧ್ಯ ಬೆಂಕಿ ಹಚ್ಚಿದ್ದರು. ರೇಣುಕಾರಾಧ್ಯ ಸಣ್ಣ ಉದ್ಯಮ ನಡೆಸುತ್ತಿದ್ದಾರೆ.
ಇದೀಗ ಸುನಂದಾ ಶ್ರೀಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶೇಕಡಾ 65ರಿಂದ 80ರಷ್ಟು ಅವರ ಶರೀರ ಸುಟ್ಟುಹೋಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ.
ತಲೆಯಿಂದ ಹಿಡಿದು ಸೊಂಟದವರೆಗೆ ಗಾಯಗಳಾಗಿವೆ ಎಂದು ಡಾ. ನಿಖಿಲ್ ಹೇಳುತ್ತಾರೆ. ನಿನ್ನೆ ರಾತ್ರಿ ಸರ್ಜನ್ ಡಾ.ಗಿರಿಧರ್ ಮತ್ತೊಂದು ಸರ್ಜರಿ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರ ತಡೆಗಟ್ಟುವ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ, ಆಸ್ಪತ್ರೆಗೆ ಭೇಟಿ ನೀಡಿ ಸುನಂದಾ ಕುಟುಂಬ ಜೊತೆ ಮಾತುಕತೆ ನಡೆಸಿದರು.ಕುಟುಂಬಕ್ಕೆ ಸಹಾಯ ಒದಗಿಸಲಾಗುವುದು ಎಂದರು.
ಸುನಂದಾ ರೇಣುಕಾರಾಧ್ಯ ಅವರನ್ನು ಮದುವೆಯಾಗದೆ ಲಿವ್ ಇನ್ ಸಂಬಂಧದಲ್ಲಿದ್ದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಸುನಂದಾ ಸೋದರ ಪ್ರವೀಣ್, ನನ್ನ ಸೋದರಿ ರೇಣುಕಾರಾಧ್ಯ ಜೊತೆಗೆ ಹಣಕಾಸು ವ್ಯವಹಾರ ಹೊಂದಿದ್ದಳು.
ಆದರೆ ಅವರು ಮದುವೆಯಾಗಿರಲಿಲ್ಲ. ಆಕೆ ಒಂಟಿಯಾಗಿ ವಾಸಿಸುತ್ತಿದ್ದಳು. ಅವಳ ದತ್ತು ಪುತ್ರ ಹಾಸ್ಟೆಲ್ ನಲ್ಲಿ ವಾಸವಾಗಿ ಓದುತ್ತಿದ್ದಾನೆ. ಕಳೆದ ಆರು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದಳು. ಇಷ್ಟು ವರ್ಷಗಳ ಕಾಲ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು ಎಂದರು.
ಬೆಂಗಳೂರು ಗ್ರಾಮಾಂತರ ಪೊಲೀಸ್ ಸೂಪರಿಂಟೆಂಡೆಂಟ್ ರಮೇಶ್ ಬಿ, ನಾವು ರೇಣುಕಾರಾಧ್ಯ ಬಗ್ಗೆ ಮಾಹಿತಿ ಪಡೆದಿದ್ದು ಸದ್ಯದಲ್ಲಿಯೇ ಹುಡುಕಿ ಬಂಧಿಸುತ್ತೇವೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರದಲ್ಲಿ ವಿರೋಧವುಂಟಾಗಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com