ಕಡಿಮೆಯಾದ ಬೆಳ್ಳಂದೂರು ಕೆರೆ ನೊರೆ, ಮಳೆಯಿಂದ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು

ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದ ನೊರೆ ಇದೀಗ ಮಳೆ ಕಡಿಯಾದ ನಂತರ ಸಿಲಿಕಾನ್...
ರಸ್ತೆಯಲ್ಲಿ ನೊರೆ
ರಸ್ತೆಯಲ್ಲಿ ನೊರೆ
ಬೆಂಗಳೂರು: ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದ ನೊರೆ ಇದೀಗ ಮಳೆ ಕಡಿಯಾದ ನಂತರ ಸಿಲಿಕಾನ್ ಸಿಟಿಯ ಪರಿಸ್ಥಿತಿ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ.
ಕಳೆದ ವಾರ ಬಿದ್ದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಈಗಲೂ ನೊರೆ ಕಾಣಿಸಿಕೊಳ್ಳುತ್ತಿದ್ದು, ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಆದರೆ ಮಳೆ ಕಡಿಮೆಯಾದ ನಂತರ ಅದರ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು ಜನ ನಿಟ್ಟೂಸಿರು ಬಿಡುವಂತಾಗಿದೆ.
ಮಳೆ ಕಡಿಮೆಯಾದ ಪರಿಣಾಮ ಬೆಳ್ಳಂದೂರು ಕೆರೆ ನೊರೆಯೂ ಕಡಿಮೆಯಾಗಿದೆ ಎಂದು ಆ ಪ್ರದೇಶದ ನಿವಾಸಿ ಹಾಗೂ ಕೆರೆ ಸಂರಕ್ಷಣಾ ತಜ್ಞೆ ಶಾಲಿನಿ ಬಟ್ರಾ ಸಹ್ನಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಆಗಸ್ಟ್ 14 ಮತ್ತು 15ರಂದು ಬಿಡುವಿಲ್ಲದ ಮಳೆಯಿಂದಾಗಿ ಕೆರೆಯ ನೊರೆ ಪ್ರಮಾಣ ಹೆಚ್ಚಾಗಿತ್ತು. ರಸ್ತೆಯ ಮೇಲೆ ಸುಮಾರು ನಾಲ್ಕೈದು ಅಡಿ ಎತ್ತರದವರೆಗೂ ನೊರೆ ಆವರಿಸಿತ್ತು. ಈ ಬಗ್ಗೆ ಜನರು ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com