ಬೆಂಗಳೂರು:: ನಟ ಉಪೇಂದ್ರ ಅವರ ಪ್ರಜಾಕಾರಣ ಪಕ್ಷಕ್ಕೆ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಬೆಂಬಲ ನೀಡಿದ್ದಾರೆ.
ಸ್ಯಾಂಡಲ್‌ವುಡ್ ನಟ ಉಪೇಂದ್ರ ಅವರು ಸ್ಥಾಪಿಸಿದ 'ಪ್ರಜಾಕಾರಣ' ಪಕ್ಷಕ್ಕೆ ಬೆಂಬಲ ಸೂಚಿಸಿದ ಶಣೈ ಉಪೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಚಿತ್ರಗಳನ್ನು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಅಕ್ರಮ ಮರಳು ದಂಧೆಯ ವಿಚಾರದಲ್ಲಿ ಸಚಿವರಾಗಿದ್ದ ಪಿ ಟಿ ಪರಮೇಶ್ವರ ನಾಯ್ಕ್ ವಿರುದ್ಧ ಸಾಮಾಜಿಕ ತಾಣಗಳ ಮೂಲಕ ಸಮರಕ್ಕಿಳಿದ ಅನುಪಮ ಶೆಣೈ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದ್ದರು.