ಬೆಂಗಳೂರು: ಸಾಜಿದಾ ಸೇರಿ ಏಳು ಮಂದಿ ಕುಷ್ಠರೋಗಿಗಳಿಗೆ ಆಧಾರ್ ದಾಖಲಾತಿ

ಸಾಜಿದಾ ಬೇಗಂ ಮತ್ತು ಇತರ ಆರು ಮಂದಿ ಕುಷ್ಠರೋಗಿಗಳ ವರದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ...
ಮಾಗಡಿ ರಸ್ತೆಯ ಕುಷ್ಠರೋಗಿಗಳ ಆಸ್ಪತ್ರೆಯಲ್ಲಿ ಆಧಾರ್ ದಾಖಲಾತಿ ಮಾಡಿಸಿಕೊಂಡ 65 ವರ್ಷದ ವೃದ್ಧೆ ಸಾಜಿದಾ ಬೇಗಂ
ಮಾಗಡಿ ರಸ್ತೆಯ ಕುಷ್ಠರೋಗಿಗಳ ಆಸ್ಪತ್ರೆಯಲ್ಲಿ ಆಧಾರ್ ದಾಖಲಾತಿ ಮಾಡಿಸಿಕೊಂಡ 65 ವರ್ಷದ ವೃದ್ಧೆ ಸಾಜಿದಾ ಬೇಗಂ
ಬೆಂಗಳೂರು: ಸಾಜಿದಾ ಬೇಗಂ ಮತ್ತು ಇತರ ಆರು ಮಂದಿ ಕುಷ್ಠರೋಗಿಗಳ ವರದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬಂದ ನಂತರ ಆಧಾರ್ ನಲ್ಲಿ ಹೆಸರು ಸೇರ್ಪಡೆಯಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಿಗಳ ಆಸ್ಪತ್ರೆಯಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ವಿಶೇಷ ಆಧಾರ್ ಸಂಖ್ಯೆ ದಾಖಲಾತಿ ಶಿಬಿರವನ್ನು ಏರ್ಪಡಿಸಿತ್ತು.
ಬಯೋಮೆಟ್ರಿಕ್ ಗುರುತಿನಲ್ಲಿ ದೃಢೀಕರಿಸಲು ಸಾಧ್ಯವಾಗದ್ದರಿಂದ ಕುಷ್ಠರೋಗ ವೈದ್ಯಾಧಿಕಾರಿ ಡಾ.ಆಯುಬ್ ಆಲಿ ಖಾನ್ ಝೈ ಸಾಜಿದಾ ಬೇಗಂ ಅವರ ವಿವರಗಳನ್ನು ನೀಡಿದರು. ಎಲ್ಲಾ ಏಳು ಮಂದಿ ರೋಗಿಗಳನ್ನು ಆಧಾರ್ ಸಂಖ್ಯೆ ದಾಖಲಾತಿಗೆ ಒಳಪಡಿಸಲಾಯಿತು. ಈ ರೋಗಿಗಳಿಗೆ ಇನ್ನೊಂದು ವಾರದಲ್ಲಿ ಇ-ಆಧಾರ್ ಒದಗಿಸಲಾಗುವುದು ಎಂದು ಹೇಳಿದರು.
ಕುಷ್ಠರೋಗಿಯಾದ ಸಾಜಿದಾಗೆ ಆಧಾರ್ ಸಂಖ್ಯೆ ಇಲ್ಲದ್ದರಿಂದ ಪಿಂಚಣಿ ಸಿಗುತ್ತಿರಲಿಲ್ಲ. ಅಕ್ಟೋಬರ್ ತಿಂಗಳ ಪಿಂಚಣಿ ಕಳೆದ ಸೋಮವಾರವಷ್ಟೆ ಸಿಕ್ಕಿತು. ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಿನ ಪಿಂಚಣಿ ಸಿಕ್ಕಿರಲಿಲ್ಲ. ಇಲಾಖೆಯಿಂದ ಬಿಡುಗಡೆಯಾಗಿದೆ ಎಂದು ಖಜಾನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಖಜಾನೆ ಇಲಾಖೆಯಿಂದ ಅಂಚೆ ಕಚೇರಿ ಮೂಲಕ ಪಿಂಚಣಿ ಪ್ರತಿ ತಿಂಗಳು ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಖಜಾನೆ ಇಲಾಖೆಯ ದಾಖಲೆಗಳ ಪ್ರಕಾರ ಏಪ್ರಿಲ್, ಮೇ ಮತ್ತು ಆಗಸ್ಟ್ ತಿಂಗಳ ಪಿಂಚಣಿ ಅಂಚೆ ಕಚೇರಿಯಿಂದ ವಾಪಸ್ಸು ಹೋಗಿದೆ. ಅಂಚೆ ಕಚೇರಿಯಿಂದ ವಾಪಸ್ಸು ಏಕೆ ಬಂದಿದೆ ಎಂಬ ಕಾರಣಗಳನ್ನು ತಿಳಿದುಕೊಳ್ಳಬೇಕಷ್ಟೆ ಎನ್ನುತ್ತಾರೆ ಅಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com