ರಾಜ್ಯದ 10,000ಕ್ಕೂ ಅಧಿಕ ಶಾಲೆಗಳು ಇ-ಶಾಲೆಗಳಾಗಿ ಪರಿವರ್ತನೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಇ-ಅಧ್ಯಯನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಇ-ಅಧ್ಯಯನ(ಇ-ಶಾಲಾ) ಪ್ರಯೋಜನವಾಗುತ್ತಿದ್ದು, ಇದನ್ನು ಇನ್ನೂ 10,000 ಶಾಲೆಗಳಿಗೆ ವಿಸ್ತರಿಸುವ ಗುರಿಯನ್ನು  ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.
ನಗರದಲ್ಲಿ ನಿನ್ನೆ ಸೆಲ್ಕೊ ಫೌಂಡೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಅನಿಸಿಕೆ ತಿಳಿಸಿ, ಪಠ್ಯಪುಸ್ತಕದ ಬದಲಿಗೆ ಟಿವಿ ಮೂಲಕ ಕಲಿಯುವುದು ವಿನೋದವೆನಿಸುತ್ತದೆ ಎನ್ನುತ್ತಾನೆ.
ನಾಗರಬಾವಿಯ ಸರ್ಕಾರಿ ಶಾಲೆಯ ಇನ್ನೊಬ್ಬ ವಿದ್ಯಾರ್ಥಿನಿ ರೂಪಾ, ಗಣಿತ ನನಗೆ ಯಾವಾಗಲೂ ಕಷ್ಟವೆನಿಸುತ್ತಿತ್ತು. ತರಗತಿಯಲ್ಲಿ ಟಿವಿಯ ಮೂಲಕ ಗಣಿತವನ್ನು ಹೇಳಿಕೊಡಲು ಆರಂಭಿಸಿದ ಮೇಲೆ ನನಗೆ ವಿಡಿಯೊ ಮತ್ತು ಆನಿಮೇಶನ್ ಮೂಲಕ ಗಣಿತ ಹೆಚ್ಚು ಅರ್ಥವಾಗುತ್ತದೆ ಮತ್ತು ಇಷ್ಟವಾಗುತ್ತದೆ ಎನ್ನುತ್ತಾಳೆ. 
ಈ ತರಗತಿಯಲ್ಲಿ ಸೌರ ವಿದ್ಯುತ್ ಮೂಲಕ ಉಪಕರಣಗಳಿಗೆ ಸಂಪರ್ಕಿಸಲಾಗಿದೆ. ಮೆಂಡಾ ಫೌಂಡೇಷನ್, ಸೆಲ್ಕೊ ಫೌಂಡೇಶನ್ ಮತ್ತು ಲೌಕ್ಯಾಸಲ್ ಟ್ರಸ್ಟ್ ಸಹಯೋಗದ ಅಭಿಯಾನ ಇ-ಶಾಲಾವಾಗಿದ್ದು, ಸರ್ಕಾರಿ ಶಾಲೆಗಳಿಗೆ ಎಲ್ ಇಡಿ ಪರದೆ ಮತ್ತು ಪಠ್ಯಗಳನ್ನು ಸರ್ಕಾರದ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ. ಇನ್ನೂ 10,000 ಶಾಲೆಗಳಿಗೆ ಅಭಿಯಾನವನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com