ಐಟಿ ಇಲಾಖೆ ಮುಂದೆ ಹಾಜರಾದ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬದವರು
ಐಟಿ ಇಲಾಖೆ ಮುಂದೆ ಹಾಜರಾದ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬದವರು

ಬೇನಾಮಿ ಮೂಲಕ 5 ಎಕ್ರೆ ಜಮೀನನ್ನು ಸಚಿವ ಡಿಕೆಶಿ ಖರೀದಿಸಲು ಯತ್ನಿಸಿದ್ದರು: ಐಟಿ ಇಲಾಖೆ ಅಧಿಕಾರಿಗಳು

ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ...
ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದ ಒಂದು ಭಾಗದ 5 ಎಕರೆ ಭೂಮಿಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಬಹಿರಂಗವಾಗಿದೆ.
ಈ ಒಪ್ಪಂದದ ಸಲುವಾಗಿ ಡಿ.ಕೆ.ಶಿವಕುಮಾರ್ ಇಬ್ಬರು ವ್ಯಕ್ತಿಗಳನ್ನು ಬಳಸಿಕೊಂಡಿದ್ದು ಅವರಲ್ಲಿ ಒಬ್ಬರು ಅವರ ಸ್ನೇಹಿತರಾಗಿದ್ದಾರೆ. ಮೈಸೂರು ರಾಜಮನೆತನದ ಸದಸ್ಯೆ ವಿಶಾಲಾಕ್ಷಿ ದೇವಿಗೆ ಸೇರಿದ್ದು ಎನ್ನಲಾದ ವಿವಾದಿತ ಭೂಮಿಯ ಒಂದು ಭಾಗವನ್ನು ಖರೀದಿಸಲು ಒಪ್ಪಂದವೇರ್ಪಟ್ಟಿತ್ತು. ಇದಕ್ಕೆ 5 ಕೋಟಿ ಆಗಲೇ ಸಂದಾಯ ಮಾಡಲಾಗಿತ್ತು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಮೈಸೂರು ರಾಜಮನೆತನಕ್ಕೆ ತಡೆಯನ್ನು ತಂದಿತ್ತು.

Related Stories

No stories found.

Advertisement

X
Kannada Prabha
www.kannadaprabha.com