ಸಿಎಂ ಭೇಟಿ ಮಾಡಿದ ಸುನೀಲ್ ಹೆಗ್ಗರವಳ್ಳಿ, ಸೂಕ್ತ ಭದ್ರತೆ ನೀಡುವಂತೆ ಮನವಿ

ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ತಮ್ಮ ಕೊಲೆಗೆ ಸುಪಾರಿ ನೀಡಿದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಸುನೀಲ್‌...
ಸುನೀಲ್ ಹೆಗ್ಗರವಳ್ಳಿ
ಸುನೀಲ್ ಹೆಗ್ಗರವಳ್ಳಿ
ಬೆಂಗಳೂರು: ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ತಮ್ಮ ಕೊಲೆಗೆ ಸುಪಾರಿ ನೀಡಿದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಗರವಳ್ಳಿ, ರವಿ ಬೆಳಗೆರೆ ಪ್ರಭಾವಿ ವ್ಯಕ್ತಿಯಾಗಿದ್ದು, ಭೂಗತ ಲೋಕದ ನಂಟಿದೆ. ತನಿಖೆಯ ದಿಕ್ಕು ತಪ್ಪದಂತೆ ನೋಡಿಕೊಳ್ಳಿ ಮತ್ತು ನಮಗೆ ಸೂಕ್ತ ಭದ್ರತೆ ನೀಡುವಂತೆ ಸಿಎಂಗೆ ಮನವಿ ಮಾಡಿರವುದಾಗಿ ತಿಳಿಸಿದ್ದಾರೆ. 
ನನ್ನ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರವಿ ಬೆಳಗೆರೆ ಜೈಲಲ್ಲೇ ಇರಲಿ. ಹೊರಗೆ ಬಂದಲ್ಲಿ ‌ನನ್ನ ಜೀವಕ್ಕೆ ಅಪಾಯ ಇದೆ. ನನಗೆ ವಯಸ್ಸಾದ ತಂದೆ, ತಾಯಿ ಇದ್ದಾರೆ. ನಾಲ್ಕೈದು ಗನ್‌ ಮ್ಯಾನ್‌ ಇಟ್ಟುಕೊಳ್ಳುವ ಸಾಮರ್ಥ್ಯವೂ ಇಲ್ಲ. ಹೀಗಾಗಿ ಪೊಲೀಸ್ ರಕ್ಷಣೆ ನೀಡುವಂತೆ ಸಿಎಂಗೆ  ಮನವಿ ಮಾಡಿದ್ದೇನೆ ಎಂದರು.
ಸುನೀಲ್  ನಿವಾಸಕ್ಕೆ ಇಬ್ಬರು ಪೇದೆಗಳ ನಿಯೋಜನೆ
ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆಯಿಂದ ಬೆದರಿಕೆ ಇದೆ ಭದ್ರತೆ ನೀಡಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಇಬ್ಬರು ಪೇದೆಗಳನ್ನು ಸುನೀಲ್  ಹೆಗ್ಗರವಳ್ಳಿ ಅವರ ನಿವಾಸಕ್ಕೆ ನಿಯೋಜನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com