ಮಾಲ್ಡೀವ್ಸ್ ಸೇನೆಯೊಂದಿಗೆ ಕರ್ನಾಟಕದಲ್ಲಿ ಭಾರತೀಯ ಸೇನೆಯ ಜಂಟಿ ತಾಲೀಮು!

ಬಹು ನಿರೀಕ್ಷಿತ ಭಾರತ ಮತ್ತು ಮಾಲ್ಡೀವ್ಸ್ ಸೇನೆಯ ಜಂಟಿ ಸಮರಾಭ್ಯಾಸ ನಮ್ಮದೇ ಕರ್ನಾಟಕದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ಬಹು ನಿರೀಕ್ಷಿತ ಭಾರತ ಮತ್ತು ಮಾಲ್ಡೀವ್ಸ್ ಸೇನೆಯ ಜಂಟಿ ಸಮರಾಭ್ಯಾಸ ನಮ್ಮದೇ ಕರ್ನಾಟಕದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಇದೇ ಡಿಸೆಂಬರ್ 15ರಿಂದ 28ರವರೆಗೆ ನಡೆಯಲಿರುವ ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ಸೇನೆಯ 8ನೇ ಆವೃತ್ತಿಯ 'ಎಕುವೆರಿನ್' ಜಂಟಿ ತಾಲಿಮು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ. ಈ ಬಗ್ಗೆ ಕೇಂದ್ರ ರಕ್ಷಣಾ  ಸಚಿವಾಲಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಭಾರತ ಮತ್ತು ಮಾಲ್ಡೀವ್ಸ್ ದೇಶಗಳ 14 ದಿನಗಳ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸ ಇದೇ ಡಿಸೆಂಬರ್ 15ರಿಂದ ಆರಂಭವಾಗಲಿದ್ದು, ಡಿಸೆಂಬರ್ 28ರಂದು ಅಂತ್ಯವಾಗಲಿದೆ  ಎಂದು ಮಾಹಿತಿ ನೀಡಿದೆ.
2009ರಿಂದ ಭಾರತೀಯ ಸೇನೆ ಹಾಗೂ ಮಾಲ್ಡೀವ್ಸ್ ಸೇನೆ 'ಎಕುವೆರಿನ್' ಜಂಟಿ ಸಮರಾಭ್ಯಾಸವನ್ನು ಆಯೋಜಿಸುತ್ತಾ ಬಂದಿದ್ದು, 2016ರ ಡಿಸೆಂಬರ್ ನಲ್ಲಿ 7ನೇ ಆವೃತ್ತಿಯ 'ಎಕುವೆರಿನ್' ಸಮರಾಭ್ಯಾಸ ಮಾಲ್ಡೀವ್ಸ್ ನ ಕಧ್ಧೂ,  ಲಾಮು ಅಟಾಲ್ ನಲ್ಲಿ ನೆರವೇರಿತ್ತು. ಇದೀಗ 8ನೇ ಆವೃತ್ತಿಯ ಸಮರಾಭ್ಯಾಸ ಭಾರತದಲ್ಲಿ ಆಯೋಜನೆಯಾಗಿದ್ದು, ಪ್ರಮುಖವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲೇ ಜಂಟಿ ಸಮರಾಭ್ಯಾಸ ನಡೆಯಲಿದೆ.
ಮಾಲ್ಡೀವ್ಸ್ ನ ಧಿವೆಹಿ ಭಾಷೆಯಲ್ಲಿ ಎಕುವೆರಿನ್ ಎಂದರೆ ಸ್ನೇಹ ಎಂದರ್ಥ. ಹೀಗಾಗಿ ಭಾರತ-ಮಾಲ್ಡೀವ್ಸ್ ಸೇನಾ ಸಮರಾಭ್ಯಾಸಕ್ಕಾಗಿ ಎಕುವೆರಿನ್ ಎಂದೇ ನಾಮಕರಣ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com