ವೈದ್ಯನಿಂದ ಹಲ್ಲು ಕಿತ್ತಿಸಿಕೊಂಡಿದ್ದ ಹುಬ್ಬಳ್ಳಿ ವ್ಯಕ್ತಿ ಸಾವು; ನಿರ್ಲಕ್ಷ್ಯ ಆರೋಪ

ಖಾಸಗಿ ಕ್ಲಿನಿಕ್ ದಂತ ವೈದ್ಯ ಮಾಡಿದ ಎಡವಟ್ಟಿನಿಂದ ತೀವ್ರವಾಗಿ ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ಸಂಭವಿಸಿದೆ ಎಂದು ಆರೋಪ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಖಾಸಗಿ ಕ್ಲಿನಿಕ್ ದಂತ ವೈದ್ಯ ಮಾಡಿದ ಎಡವಟ್ಟಿನಿಂದ ತೀವ್ರವಾಗಿ ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ಸಂಭವಿಸಿದೆ ಎಂದು ಆರೋಪ ಮಾಡಲಾಗಿದೆ. 
ಅಬ್ದುಲ್ ಖಾದರ್ ಬಾಗಲಕೋಟೆ ಮೃತ ವ್ಯಕ್ತಿಯೆಂದು ಹೇಳಲಾಗುತ್ತಿದೆ. ಡಿ.8 ರಂದು ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದ ಅಬ್ದುಲ್ ಖಾದರ್ ಗೆ ಇಲ್ಲಿನ ರತ್ನಾ ಡೆಂಟರ್ ಕ್ಲಿನಿಕ್ ನ ವೈದ್ಯರು ಚಿಕಿತ್ಸೆ ನೀರು ಮೂರು ಹಲ್ಲುಗಳನ್ನು ತೆಗೆದು ಹಾಕಿದ್ದರು. ಆ ವೇಳೆ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಅಬ್ದುಲ್ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.
ಬಳಿಕ ರೋಗಿಯಿಂದ ಇದರಲ್ಲಿ ವೈದ್ಯರ ತಪ್ಪು ಇಲ್ಲ ಎಂದು ಪತ್ರ ಬರೆಸಿಕೊಂಡು ಹೆಬ್ಬೆಟ್ಟು ಸಹಿ ಮಾಡಿಸಿಕೊಂಡೂ ರೂ.10 ಸಾವಿರ ಕೊಟ್ಟು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ, ಕಳೆದ 1 ವಾರದಿಂದ ಕೋಮಾ ಸ್ಥಿತಿಯಲ್ಲಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಭಾನುವಾರ ಮೃತನಾಗಿದ್ದಾನೆ. ಈ ಸಂಬಂಧ ವೈದ್ಯರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com