ಬಾಡಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ, ಮೈಸೂರಿನಲ್ಲಿ ಇಬ್ಬರ ಬಂಧನ

ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೈಸೂರಿನಲ್ಲಿ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಪೊಲೀಸ್ ದಾಳಿ ನಡೆದ ಸ್ಪಾ ಸೆಂಟರ್
ಪೊಲೀಸ್ ದಾಳಿ ನಡೆದ ಸ್ಪಾ ಸೆಂಟರ್
Updated on
ಮೈಸೂರು: ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೈಸೂರಿನಲ್ಲಿ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಅಂತೆಯೇ ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.  ಪ್ರಸ್ತುತ ಸ್ಪಾ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು, ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರನ್ನು ಸ್ಪಾ ಮಾಲೀಕ ವೇಶ್ಯಾವಾಟಿಕೆಗೆ ಒತ್ತಾಯ ಪಡಿಸುತ್ತಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ನೊಂದ ಯುವತಿ ಮೈಸೂರಿನ ಒಡನಾಡಿ ಸಂಸ್ಥೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದು, ಒಡನಾಡಿ ಸಂಸ್ಥೆಗೆ ಪತ್ರದ ಮೂಲಕ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳಂತೆ. ಪತ್ರದ ಮಾಹಿತಿ  ಪಡೆದ ಒಡನಾಡಿ ಸಂಸ್ಥೆ ಸರಸ್ವತಿಪುರಂ ಠಾಣೆಯ ಪೊಲೀಸರು ಹಾಗೂ ಮಹಿಳಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಯುವತಿಯನ್ನ ರಕ್ಷಿಸಲಾಗಿದೆ. ಮಸಾಜ್ ಮಾಡಿಸಿಕೊಳ್ಳಲು ಬಂದ ಪುರಷರೊಂದಿಗೆ ಲೈಂಗಿಕವಾಗಿ  ಸಹಕರಿಸುವಂತೆ ಒತ್ತಾಯಿಸುತ್ತಿದ್ದರು ಎಂದು ನೊಂದ ಯುವತಿ ಆರೋಪಿಸಿದ್ದಳು.
ಯುವತಿ ದೂರಿನಲ್ಲಿ ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ ನಟರ ಹೆಸರು?
ಇನ್ನು ಪೊಲೀಸರಿಗೆ ದೂರು ನೀಡಿರುವ ಯುವತಿ ದೂರಿನಲ್ಲಿ ತನ್ನ ಮೇಲಾದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, "ನನ್ನನ್ನು ಮಹಿಳೆಯರಿಗೆ ಮಸಾಜ್ ಮಾಡಲು ಎಂದು ಇಲ್ಲಿಗೆ ಕರೆ ತರಲಾಗಿತ್ತು. ನಂತರದ ಕೆಲವು  ದಿನಗಳಲ್ಲಿ ಪುರುಷರಿಗೆ ಮಸಾಜ್ ಮಾಡುವಂತೆ ನನ್ನ ಒತ್ತಡ ಹಾಕಲಾಯಿತು. ಒಬ್ಬಬ್ಬ ಪುರುಷರು ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಸ್ಪಾ ಮಾಲೀಕ ರಾಜೇಶ್ ಗೆ ತಿಳಿಸಿದರೆ ಆತ ಅದಕ್ಕೆ ಸಹಕರಿಸಬೇಕೆಂದು  ಹೇಳಿದ್ದಾನೆ. ಈ ವೇಳೆ ಸ್ಪಾಗೆ ಸ್ಯಾಂಡಲ್‍ವುಡ್ ಇಬ್ಬರೂ ಹಾಸ್ಯ ನಟರಿಬ್ಬರು ಬಂದಿದ್ದು, ಅವರಿಗೂ ನಾನು ಮಸಾಜ್ ಮಾಡಿದ್ದೇನೆ. ಆದರೆ ನನಗೆ ಅನ್ಯ ಪುರುಷರೊಂದಿಗೆ ಲೈಂಗಿಕವಾಗಿ ಸಹಕರಿಸಲು ಇಷ್ಟವಿಲ್ಲ ಎಂದು ಯುವತಿ  ಪೊಲೀಸರಿಗೆ ಲಿಖಿತ ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು ಯುವತಿ ದೂರಿನಲ್ಲಿ ಉಲ್ಲೇಖಿಸಿರುವ ಇಬ್ಬರು ನಟರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಪೊಲೀಸ್ ಮೂಲಗಳು ತಿಳಿಸಿರುವಂತೆ ಸಂತ್ರಸ್ಥ ಯುವತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯೊಂದರ  ನಿವಾಸಿ ಎಂದು ತಿಳಿದು ಬಂದಿದ್ದು, ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇವೆ ಎಂದು ನಂಬಿಸಿ ಸ್ಪಾ ಮಾಲೀಕ ರಾಜೇಶ್ ಆಕೆಯನ್ನು ಮೈಸೂರಿಗೆ ಕರೆತಂದಿದ್ದನಂತೆ. ಅಲ್ಲದೆ ಸಿನಿಮಾದಲ್ಲಿ ಅವಕಾಶ ಸಿಗುವರೆಗೂ ಸ್ಪಾ ನಲ್ಲಿ  ಫ್ರೀಯಾಗಿ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿತ್ತು. ರಾಜೇಶ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com