ರಾಜ್ಯ ಸರ್ಕಾರಿ ಕಾಲೇಜುಗಳಲ್ಲಿ ಪಿಯು ಶಿಕ್ಷಕರ ಕೊರತೆ: ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ಮಕ್ಕಳ ಭವಿಷ್ಯ ರೂಪಿಸಬೇಕಾದ ರಾಜ್ಯದ ನೂರಾರು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಇಂದಿಗೂ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಇದು ಶಿಕ್ಷಣದ ಗುಣಮಟ್ಟದ ಮೇಲೆ ನೇರ ಪರಿಣಾಮವನ್ನು ಬೀರತೊಡಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಕ್ಕಳ ಭವಿಷ್ಯ ರೂಪಿಸಬೇಕಾದ ರಾಜ್ಯದ ನೂರಾರು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಇಂದಿಗೂ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಇದು ಶಿಕ್ಷಣದ ಗುಣಮಟ್ಟದ ಮೇಲೆ ನೇರ ಪರಿಣಾಮವನ್ನು ಬೀರತೊಡಗಿದೆ. 
ಕಾಲೇಜಿನಲ್ಲಿ ಶಿಕ್ಷಕರ ಕೊರೆತೆಯುಂಟಾಗಿರುವ ಪರಿಣಾಮ ಮಕ್ಕಳು ಅರೆಕಾಲಿಕ ಉಪನ್ಯಾಕರ ಮಾರ್ಗದರ್ಶನದ ಮೇರೆಗೆ ಒತ್ತಡದಿಂದ ಕಲಿಯಬೇಕಾದ ಪರಿಸ್ಥಿತಿ ಎದುರಾಗಿದೆ. 
ಪದವಿ ಪೂರ್ವ ಶಿಕ್ಷಣ ಮಂಡಳಿ ಮಾಹಿತಿ ನೀಡಿರುವ ಪ್ರಕಾರ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಒಟ್ಟು 2605 ಉಪನ್ಯಾಕರ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ವಾಣಿಜ್ಯ ವಿಭಾಗದಲ್ಲೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ. 
ಕನ್ನಡ, ಅರ್ಥಶಾಸ್ತ್ರ, ಇಂಗ್ಲೀಷ್ ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ಸೇರಿದಂತೆ ಹಲವಾರು ವಿಷಯಗಳ ವಿಭಾಗದಲ್ಲಿ ಹಲವಾರು ಹುತ್ತೆಗಳು ಖಾಲಿಯಿದ್ದು, ಅವುಗಳು ಶೀಘ್ರದಲ್ಲಿ ಭರ್ತಿಯಾಗಬೇಕಿದೆ. ಪ್ರೌಢಶಾಲಾ ಶಿಕ್ಷಕರನ್ನು ಅವರ ವಿದ್ಯಾರ್ಹತೆ ಮೇರೆಗೆ ಪಿಯು ಕಾಲೇಜಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅದರಂತೆ ಪ್ರಾಥಮಿಕ ಹಂತದಿಂದ ಪರೀಕ್ಷೆಗಳನ್ನು ಆಯೋಜಿಸಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಾರ ತನ್ವೀರ್ ಸೇಠ್ ಅವರು ಹೇಳಿದ್ದಾರೆ. 
ಒಟ್ಟು 12 ಸಾವಿರ ಉಪನ್ಯಾಸಕರ ಹುದ್ದೆಗಳು ಮಂಜುರಾಗಿವೆ. ಅದರಲ್ಲಿ 2605 ಭರ್ತಿಯಾಗದೆ ಖಾಲಿ ಇರುವ ಹುದ್ದೆಗಳಾಗಿವೆ. ವಿಜ್ಞಾನ ವಿಷಯದ ಶಿಕ್ಷಕರ ಸಂಖ್ಯೆ ಹೆಚ್ಚಾಗಿವೆ. ಆದರೆ, ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸಿ ವಿಜ್ಞಾನ ವಿಭಾಗದ ಹುದ್ದೆಗಳ ಸಂಖ್ಯೆ ಕಡಿಮೆ ಮಾಡಿ ವಾಣಿಜ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ವಿಜ್ಞಾನ ವಿಭಾಗದ ಶಿಕ್ಷಕರನ್ನು ಇತರೆ ವಿಜ್ಞಾನ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದೀಗ ಎಲ್ಲವೂ ಸರಿಯಾಗಿದ್ದು, ಶೀಘ್ರದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. 2018ರ ಫೆಬ್ರವರಿಯೊಳಗಾಗಿ ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದ್ದಾರೆ. 
806 ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲ
ಇನ್ನು ರಾಜ್ಯದ ಹಲವು ಸರ್ಕಾರಿ ಪಿಯು ಕಾಲೇಜುಗಳು ಪ್ರಾಂಶುಪಾಲರೇ ಇಲ್ಲದೆ ನಡೆಯುತ್ತಿರುವುದಾಗಿ ತಿಳಿಬಂದಿದೆ. 1,269 ಕಾಲೇಜುಗಳ ಪೈಕಿ 806 ಕಾಲೇಜುಗಳು ಪ್ರಾಂಶುಪಾಲರಿಲ್ಲದೆ ನಡೆಯುತ್ತಿದೆ. 2016ರ ಶೈಕ್ಷಣಿಕ ವರ್ಷದಲ್ಲಿ ಇಲಾಖೆ 414 ಪ್ರಾಂಶುಪಾಲರನ್ನು ನೇಮಕ ಮಾಡಿತ್ತು. 129 ಪ್ರಾಂಶುಪಾಲರನ್ನು ನೇರವಾಗಿ ನೇಮಕ ಮಾಡಿಕೊಂಡಿತ್ತು. ಫೆಬ್ರವರಿಯೊಳಗಾಗಿ ಉಳಿದ ಎಲ್ಲಾ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತನ್ವೀರ್ ಸೇಠ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com