ಬೆಂಗಳೂರು: ಹೊಸ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಜಾರ್ಜ್ ಚಾಲನೆ

ನಿತ್ಯ 15 ದಶ ಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಕೊಳಚೆ ನೀರಿನ ಸಂಸ್ಕರಣಾ....
ಕೆಜೆ ಜಾರ್ಜ್
ಕೆಜೆ ಜಾರ್ಜ್

ಬೆಂಗಳೂರು: ನಿತ್ಯ 15 ದಶ ಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಕೊಳಚೆ ನೀರಿನ ಸಂಸ್ಕರಣಾ ಘಟಕಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಶನಿವಾರ ಚಾಲನೆ ನೀಡಿದ್ದಾರೆ.

ಸೀಗೆಹಳ್ಳಿಯ ಯಲ್ಲಮಲ್ಲಪ್ಪ ಚೆಟ್ಟಿ ಕೆರೆ ಬಳಿ ಹೊಸ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲಾಗಿದ್ದು, ಇಂದು ಅದಕ್ಕೆ ಚಾಲನೆ ನೀಡಿ ಮಾತನಾಡಿದ ಜಾರ್ಜ್, ನಗರದಲ್ಲಿ ನಿತ್ಯ 1400 ದಶ ಲಕ್ಷ ಲೀಟರ್ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಆ ಪೈಕಿ 997 ದಶ ಲಕ್ಷ ಲೀಟರ್ ಸಂಸ್ಕರಣೆಯಾಗುತ್ತಿದ್ದು, 2020ರ ವೇಳೆ ನಗರದಲ್ಲಿ ಉತ್ಪಾದನೆಯಾಗುವ ಎಲ್ಲಾ ಕೊಳಚೆ ನೀರನ್ನು ಸಂಸ್ಕರಿಸುವ ಗುರಿ ಹೊಂದಲಾಗಿದೆ ಎಂದರು.

ಕೆಆರ್ ಪುರಂ, ಭಟ್ಟರಹಳ್ಳಿ, ಹೂಡಿ, ಮೇಧಹಳ್ಳಿ ಮತ್ತು ಮಹಾದೇವಪುರದ ಕೊಳಚೆ ನೀರನ್ನು ಈ ಘಟಕದಲ್ಲಿ ಸಂಸ್ಕರಿಸಲಾಗುವುದು. ಈ ಘಟಕವನ್ನು 67 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಜಾರ್ಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com