ಬೆಂಗಳೂರು: ನಿನ್ನೆ ಮುಂಬೈಯ ಕಮಲಾ ಮಿಲ್ಸ್ ನಲ್ಲಿ ಉಂಟಾದ ಅಗ್ನಿ ದುರಂತದಿಂದ ಬೆಂಗಳೂರಿನ ಅನೇಕ ಪ್ರತಿಷ್ಠಿತ ಸ್ಥಳಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿರುವ ಮೇಲ್ಛಾವಣಿಯ(ರೂಫ್ ಟಾಪ್) ಪಬ್ ಮತ್ತು ಬಾರ್ ಗಳ ಬಗ್ಗೆ ಜನರು ಆತಂಕಪಡುವಂತೆ ಮಾಡುತ್ತಿವೆ.
ಮೊನ್ನೆ ಮಧ್ಯರಾತ್ರಿ ಮುಂಬೈಯ ಕಮಲಾ ಮಿಲ್ಸ್ ಕಂಪೌಂಡ್ ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ರೂಫ್ ಟಾಪ್ ಪಬ್ ನಲ್ಲಿ ಬೆಂಕಿ ಕಾಣಿಸಿಕೊಂಡು ತಕ್ಷಣವೇ ಸುತ್ತಲೂ ಆವರಿಸಿ ಮಹಿಳೆಯೊಬ್ಬರ 29 ವರ್ಷದ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೊಡಗಿದ್ದ ಮಂದಿಯಲ್ಲಿ 14 ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದರು. ಇತರ 12 ಮಂದಿ ಗಾಯಗೊಂಡಿದ್ದರು.
ನಗರದ ಪ್ರತಿಷ್ಠಿತ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ರೂಫ್ ಟಾಪ್ ಪಬ್ ಗಳು, ತಿಂಡಿತಿನಿಸುಗಳ ತಾಣಗಳು, ಬಾರ್ ಅಂಡ್ ರೆಸ್ಟೊರೆಂಟ್ ಗಳು ಮತ್ತು ವಾಣಿಜ್ಯ ಕಟ್ಟಡಗಳು ಹೆಚ್ಚಾಗುತ್ತಿದ್ದು ಮುಂಬೈಯಲ್ಲಿ ಮೊನ್ನೆ ನಡೆದ ಅಗ್ನಿ ದುರಂತ ನಂತರ ಇದರ ವಿರುದ್ಧವಾಗಿ ಜನರ ಕೂಗು, ಪ್ರತಿಭಟನೆ ಕೇಳಿಬರುತ್ತಿವೆ.
ಜನವಸತಿ ಪ್ರದೇಶಗಳಲ್ಲಿ ಪಬ್, ಬಾರ್ ಅಂಡ್ ರೆಸ್ಟೊರೆಂಟ್ ಗಳು ತಲೆಯೆತ್ತುತ್ತಿರುವ ಬಗ್ಗೆ, ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಬಾರದೆಂದು ನಗರ ಪಾಲಿಕೆಗಳಿಗೆ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಹೊಸ ವರ್ಷಾಚರಣೆಗೆ ಇನ್ನೊಂದೇ ದಿನ ಬಾಕಿ ಇರುವಾಗ ದೇಶದ ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಪಾರ್ಟಿಗಳು ನಡೆಯುವಾಗ ಅಲ್ಲಿನ ಸುರಕ್ಷತೆ ಬಗ್ಗೆ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಸತಿ ಪ್ರದೇಶಗಳಲ್ಲಿ ತಲೆಯೆತ್ತುವ ಅಕ್ರಮ ಬಾರ್ ಅಂಡ್ ರೆಸ್ಟೊರೆಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ನಗರಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಇಂದಿರಾ ನಗರದ ನಿವಾಸಿಗಳು ನಿನ್ನೆ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಮನವಿ ಸಲ್ಲಿಸಿ ವಸತಿ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ನಾಳೆ ಹೊಸ ವರ್ಷಾಚರಣೆಗೆ ವಸತಿ ಪ್ರದೇಶಗಳಲ್ಲಿ ರೂಫ್ ಟಾಪ್ ಪಬ್ ಗಳಲ್ಲಿ ಆಚರಣೆಗೆ ಅವಕಾಶ ನೀಡಬಾರದೆಂದು ಆದೇಶ ನೀಡಬೇಕೆಂದು ಕೋರಿದರು.
ಕಮಲಾ ಮಿಲ್ಸ್ ನ ಘಟನೆ ಎಂಟು ವರ್ಷಗಳ ಹಿಂದೆ ಕಾರ್ಲ್ಟನ್ ಟವರ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ 13 ಮಂದಿ ಮೃತಪಟ್ಟ ಘಟನೆಯನ್ನು ನೆನಪಿಸುತ್ತದೆ.