ತ್ರಿವಳಿ ತಲಾಖ್ ಮಸೂದೆ ಮಂಡನೆಗೂ ಮೊದಲು ಕೇಂದ್ರ ಸರ್ಕಾರವು ರಾಜ್ಯದ ಅಭಿಪ್ರಾಯವನ್ನು ಕೇಳಿತ್ತು. ಆದರೆ, ನಾವು ಯಾವುದೇ ಅಭಿಪ್ರಾಯವನ್ನು ನೀಡಿರಲಿಲ್ಲ. ಪ್ರತಿಕ್ರಿಯೆ ನೀಡಿಲ್ಲ ಎಂದರೆ, ನಾವು ಅದಕ್ಕೆ ವಿರೋಧಿಸುತ್ತಿದ್ದೇವೆಂದು ಅರ್ಥ. ಈ ಬಗ್ಗೆ ಮತ್ತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ನಾಯಕರು ನೀಡಿದ ಪ್ರತಿಕ್ರಿಯೆ ಬಳಿಕ ಕೇಂದ್ರಕ್ಕೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆಂದು ತಿಳಿಸಿದ್ದಾರೆ.