ಮದ್ಯಪಾನ ಮಾಡುವ ಮಕ್ಕಳಿಗೆ ಕೌನ್ಸಿಲಿಂಗ್ ನೀಡಲು ಸರ್ಕಾರ ಚಿಂತನೆ

ಮದ್ಯಪಾನ ಹಾಗೂ ಧೂಮಪಾನ ಮಾಡುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹದ್ದಿನ ಕಣ್ಣು ಇಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮದ್ಯಪಾನ ಹಾಗೂ ಧೂಮಪಾನ ಮಾಡುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹದ್ದಿನ ಕಣ್ಣು ಇಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. 
ಇಲಾಖೆಯ ಮೂಲಗಳು ಮಾಹಿತಿ ನೀಡಿರುವ ಪ್ರಕಾರ, ಸರ್ಕಾರಿ ಶಾಲೆಯಲ್ಲಿರುವ ಕೆಲ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಮದ್ಯಪಾನ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನಲೆಯಲ್ಲಿ ಮದ್ಯಪಾನ ಮಾಡುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ (ಆಪ್ತ ಸಮಾಲೋಚನೆ) ನೀಡಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿವೆ. 
ವಿದ್ಯಾರ್ಥಿಗಳ ವ್ಯಸನಗಳ ಕುರಿತಂತೆ ಶಿಕ್ಷಕರೊಂದಿಗೆ ಮಾತನಾಡಿದ್ದಾಗ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲದಿರುವುದು ತಿಳಿದುಬಂದಿದೆ. ಆದರೂ, ಕೆಲ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಶಾಲಾ ಅವಧಿಯಲ್ಲಿ ಮದ್ಯಪಾನ ಮಾಡುತ್ತಿರುತ್ತಾರೆಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. 
ವಿದ್ಯಾರ್ಥಿಗಳ ವ್ಯಸನಗಳ ಕುರಿತಂತೆ ಕಣ್ಗಾವಲಿರಿಸುವಂತೆ ಶಾಲೆಗಳ ಎಸ್'ಡಿಎಂಸಿಗೆ ಸೂಚನೆ ನೀಡಿರುವ ಇಲಾಖೆ, ವಿದ್ಯಾರ್ಥಿಗಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ವಿದ್ಯಾರ್ಥಿ ವ್ಯಸನವನ್ನು ಬಿಡುವಂತೆ ಮಾಡಬೇಕು ಎಂದು ಸೂಚಿಸಿದೆ ಎಂದು ತಿಳಿದುಬಂದಿದೆ. 
ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷಕರ ಪತ್ನಿಯರೇ ವೇತನ ಸಂದರ್ಭದಲ್ಲಿ ಶಾಲೆಯ ಮುಂದೆ ಬಂದು ನಿಲ್ಲುತ್ತಾರೆ. ಮದ್ಯಪಾನಕ್ಕೆ ಹಣವನ್ನು ಪತಿ ಖರ್ಚು ಮಾಡುತ್ತಿದ್ದು, ಬ್ಯಾಂಕ್ ಖಾತೆಗಳಿಗೆ ಹಾಕುವ ಬದಲು ನಮ್ಮ ಕೈಗೆ ಹಣವನ್ನು ನೀಡಿ ಎಂದು ಕೇಳುತ್ತಾರೆಂದು ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com