ಬೆಳಗಾವಿ: ದುಷ್ಕರ್ಮಿಗಳನ್ನು ಹಿಡಿಯಲು ಓಡುವಾಗ ಬಾವಿಗೆ ಬಿದ್ದ ಪೊಲೀಸ್ ಪೇದೆ

ದುಷ್ಕರ್ಮಿಗಳನ್ನು ಅಟ್ಟಾಡಿಸಿಕೊಂಡು ಹೋಗುವ ವೇಳೆ ಆಯತಪ್ಪಿ ಬಾವಿಗೆ ಬಿದ್ದ ಪೇದೆಯೊಬ್ಬರು ಇಡೀ ರಾತ್ರಿಯನ್ನು ಬಾವಿಯೊಳಗೆ ಕಳೆದಿರುವ ಘಟನೆ ಬೆಳಗಾವಿಯಲ್ಲಿ ...
ಬಾವಿಗೆ ಬಿದ್ದಿರುವ ಪೇದೆ ರಾಜು
ಬಾವಿಗೆ ಬಿದ್ದಿರುವ ಪೇದೆ ರಾಜು
Updated on

ಬೆಳಗಾವಿ: ದುಷ್ಕರ್ಮಿಗಳನ್ನು ಅಟ್ಟಾಡಿಸಿಕೊಂಡು ಹೋಗುವ ವೇಳೆ ಆಯತಪ್ಪಿ ಬಾವಿಗೆ ಬಿದ್ದ ಪೇದೆಯೊಬ್ಬರು ಇಡೀ ರಾತ್ರಿಯನ್ನು ಬಾವಿಯೊಳಗೆ ಕಳೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಕಾಕತಿ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ರಾಜು ಕೇರಿಮನಿ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಕಾರ್ ಪಾರ್ಕಿಂಗ್ ಸ್ಥಳದಿಂದ ಯುವತಿ ಕೂಗುವ ಶಬ್ದ ಕೇಳಿದೆ, ಈ ವೇಳೆ ರಾಜು ಆಕೆಯ ರಕ್ಷಣೆಗೆ ದಾವಿಸಿದ್ದಾರೆ.ಕಾರಿನ ಬಳಿ ಪೇದೆ ತೆರಳುತ್ತಿದ್ದಂತೆ ಕಾರಿನಲ್ಲಿದ್ದ ನಾಲ್ವರು ಯುವಕರು, ರಾಜು ಅವರನ್ನು ತಳ್ಳಿ ಓಡಿ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿ ಓಡಿದ ಕತ್ತಲೆಯಲ್ಲಿ ಬಾವಿಗೆ ಬಿದ್ದಿದ್ದಾರೆ.

20 ಅಡಿಯ ಬಾವಿಯಲ್ಲಿ ಕೇವಲ ನಾಲ್ಕು ಅಡಿ ಮಾತ್ರ ನೀರು ಇತ್ತು. ಬೆಳಿಗ್ಗೆ ಹೊಲದ ಮಾಲೀಕ ಬಾವಿಯ ನೀರು ಹಾಯಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ರಾಜು ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜು ಅವರ ಕಾಲು ಮುರಿದಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com