ಅರ್ಲಿ ವಾರ್ನಿಂಗ್ & ಕಂಟ್ರೋಲ್ ಸಿಸ್ಟಮ್
ರಾಜ್ಯ
ಅವಾಕ್ಸ್ ಸರ್ವೇಕ್ಷಣೆ ವಿಮಾನ ಸೇನೆಗೆ ಸೇರ್ಪಡೆ: ಈ ಬಾರಿಯ ಏರ್ ಶೋ ವಿಶೇಷತೆ
ಐ ಇನ್ ದಿ ಸ್ಕೈ (Eye in the Sky) ಎಂದೇ ಪ್ರಸಿದ್ಧಿ ಪಡೆದಿರುವ ದೇಶಿ ನಿರ್ಮಿತ ಅರ್ಲಿ ವಾರ್ನಿಂಗ್ಽ ಕಂಟ್ರೋಲ್ ಸಿಸ್ಟಮ್ ವಿಮಾನ ಸೇನೆಗೆ ಸೇರ್ಪಡೆಗೊಳ್ಳುತ್ತಿರುವುದು ಈ ಬಾರಿಯ ಏರ್ ಶೋ ವಿಶೇಷತೆ.
ಬೆಂಗಳೂರು: ಐ ಇನ್ ದಿ ಸ್ಕೈ (Eye in the Sky) ಎಂದೇ ಪ್ರಸಿದ್ಧಿ ಪಡೆದಿರುವ ದೇಶಿ ನಿರ್ಮಿತ ಅರ್ಲಿ ವಾರ್ನಿಂಗ್ & ಕಂಟ್ರೋಲ್ ಸಿಸ್ಟಮ್ ವಿಮಾನ ಸೇನೆಗೆ ಸೇರ್ಪಡೆಗೊಳ್ಳುತ್ತಿರುವುದು ಈ ಬಾರಿಯ ಏರ್ ಶೋ ವಿಶೇಷತೆಯಾಗಿದೆ.
ಪಾಕಿಸ್ತಾನ, ಚೀನಾದಿಂದ ಎದುರಾಗುವ ಕ್ರೂಸ್ ಕ್ಷಿಪಣಿಗಳ ದಾಳಿಯನ್ನು ಹಾಗೂ ಡ್ರೋನ್ ಗಳನ್ನು ಗುರುತಿಸುವುದು ಸೇರಿದಂತೆ ಶತ್ರುಗಳ ಯುದ್ಧ ವಿಮಾನಗಳು, ವೈಮಾನಿಕ ದಾಳಿಗಳ ಕುರಿತು ಎಚ್ಚರಿಕೆ ಸಂದೇಶಗಳನ್ನು ರವಾನಿಸುವುದಕ್ಕಾಗಿ ಏರ್ ಬೋರ್ನ್ ಅರ್ಲಿ ವಾರ್ನಿಂಗ್ ಸಿಸ್ಟಮ್ ನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸುಮಾರು 100 ಕಿಮೀ ವ್ಯಾಪ್ತಿಯ ವರೆಗೂ ಸರ್ವೇಕ್ಷಣೆ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಅರ್ಲಿ ವಾರ್ನಿಂಗ್ ಕಂಟ್ರೋಲ್ ಸಿಸ್ಟಮ್ ವಿಮಾನ 240 ಡಿಗ್ರಿ ಕೋನದಲ್ಲಿ ಸಂದೇಶಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದ್ದು, ಏರ್ ಶೋದ ಪ್ರಮುಖ ಆಕರ್ಷಣೆಯಾಗಿದೆ.
ಬೆಂಗಳೂರಿನ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ನಿರ್ಮಿಸಿರುವ ಅರ್ಲಿ ವಾರ್ನಿಂಗ್ಽ ಕಂಟ್ರೋಲ್ ಸಿಸ್ಟಮ್ ವಿಮಾನ ಸ್ವಯಂ ರಕ್ಷಣಾ ಸಾಧನಗಳನ್ನೂ ಒಳಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ