ಶೀಘ್ರವೇ ಭಾರತೀಯ ಯೋಧರ ಮುಡಿಗೇರಲಿದೆ ಹಗುರ ಹೆಲ್ಮೆಟ್

ಭಾರತೀಯ ಯೋಧರು ಶೀಘ್ರವೇ ಭಾರರಹಿತ ಹೆಲ್ಮೆಟ್ ಧರಿಸಲಿದ್ದಾರೆ. ಕಾನ್ಪುರ ಮೂಲದ ರಕ್ಷಣಾ ಸಾಮಾಗ್ರಿ ತಯಾರಿಕಾ ಕಂಪನಿ ಜೊತೆ ವ್ಯವಹಾರ ನಡೆದಿದ್ದು,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತೀಯ ಯೋಧರು ಶೀಘ್ರವೇ ಭಾರರಹಿತ ಹೆಲ್ಮೆಟ್ ಧರಿಸಲಿದ್ದಾರೆ. ಕಾನ್ಪುರ ಮೂಲದ ರಕ್ಷಣಾ ಸಾಮಾಗ್ರಿ ತಯಾರಿಕಾ ಕಂಪನಿ ಜೊತೆ ವ್ಯವಹಾರ ನಡೆದಿದ್ದು, 1.58 ಲಕ್ಷ ಅಲ್ಟ್ರಾ ಲೈಟ್ ವೈಯ್ಟ್ ಹೆಲ್ಮೆಟ್ ಯೋಧರನ್ನು ತಲುಪಲಿವೆ.

ಈ ಹೆಲ್ಮೆಟ್ ಗಳ ತಯಾರಿಕೆಗೆ 180 ಕೋಟಿ ರು ವೆಚ್ಚವಾಗಲಿದೆ.ಈ ಹೆಲ್ಮೆಟ್ ಗಳು 1 ಕೆಜಿಗೂ ಕಡಿಮೆ ತೂಕವಿರುತ್ತವೆ. ಜೊತೆಗೆ ಇವುಗಳಲ್ಲಿ ಯಾವುದೇ ಬೋಲ್ಟ್ ಇರುವುದಿಲ್ಲ. 9ಎಂಎಂ ಮದ್ದುಗುಂಡಿನ ದಾಳಿಯನ್ನು ತಡೆಯಬಲ್ಲ ಸಾಮರ್ಥ್ಯವಿರುತ್ತದೆ.

ಮೊದಲ ಹಂತದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಭಾರತೀಯ ಸೇನೆಗೆ ಹೆಲ್ಮೆಟ್ ಗಳು ಪೂರೈಕೆಯಾಗಲಿವೆ, 2016 ರ ಡಿಸೆಂಬರ್ ನಲ್ಲಿ ಈ ಒಪ್ಪಂದ ನಡೆದಿದ್ದು, ಹೊಸ ಹೆಲ್ಮೆಟ್ ಗಳ ತಯಾರಿಕಾ ಕೆಲಸ ಈಗಾಗಲೇ ಆರಂಭವಾಗಿದೆ ಎಂದು  ಎಂಕೆಯು ಕಂಪನಿಯ ಹಿರಿಯ ವ್ಯವಸ್ಥಾಪಕ ರಾಜೇಶ್ ಗುಪ್ತಾ ಹೇಳಿದ್ದಾರೆ. ಯೋಧರು ಧರಿಸುವ ಈ ಹೆಲ್ಮೆಟ್ ಗಳಿಗೆ ಮುಕುಟ್ ಎಂದ ಹೆಸರಿಡಲಾಗಿದೆ. ಯೋಧರ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹಿಂದಿನ ಹೆಲ್ಮೆಟ್ ಗಳು ಕಬ್ಬಿಣದಿಂದ ತಯಾರಾಗಿದ್ದು ತುಂಭಾ ಭಾರವಾಗಿದ್ದವು.

ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಸಂಖ್ಯೆಯಲ್ಲಿ ಹೆಲ್ಮೆಟ್ ತಯಾರಿಕೆಗೆ ಆರ್ಡರ್ ಮಾಡಲಾಗಿದೆ.  ದಶಕದ ಹಿಂದೆ ಭಾರತೀಯ ಸೇನೆ ಇಸ್ರೇಲ್ ನಿಂದ ಹೆಲ್ಮೆಟ್ ಗಳನ್ನು ಆಮದು ಮಾಡಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ಕಾರ್ಗಿಲ್ ಯುದ್ದದಲ್ಲಿ ಶೇ.26 ರಷ್ಟು ಸೈನಿಕರು ತಲೆಗೆ ಉಂಟಾದ ಗಾಯಗಳಿಂದ ಮೃತ ಪಟ್ಟಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಈ ಹೊಸ ಹೆಲ್ಮೆಟ್ ಗಳು ಯೋಧರಿಗೆ ಹೆಚ್ಚು ಸುರಕ್ಷಿತವಾಗಿವೆ. ಎಲ್ಲಾಕ್ಕಿಂತ ಹೆಚ್ಚಾಗಿ ಈ ಹೆಲ್ಮೆಟ್  ತಯಾರಿಕೆಗೆ ಬಳಸಿರುವ ಲೋಹ ಉತ್ತಮ ವಾಗಿದ್ದು, ಯಾವುದೇ ರೀತಿಯ ಅಲರ್ಜಿ ಹಾಗೂ ಟಾಕ್ಸಿನ್ ಅಂಶ ಇದರಲ್ಲಿ ಇರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com