ರಾಜ್ಯಾದ್ಯಂತ ಧೂಮಪಾನಿಗಳಿಂದ 1.7 ಕೋಟಿ ರು. ದಂಡ ವಸೂಲಿ: ಕೆಎಸ್ಆರ್ ಟಿಸಿ
ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧೂಮಪಾನ ವಿರೋಧಿ ನಡೆ ಅನಿರೀಕ್ಷಿತ ಪ್ರಮಾಣದ ಹಣ ವಸೂಲು ಮಾಡಿದೆ.
2013 ರಿಂದ ರಾಜ್ಯದ ವಿವಿದ ಕೆಎಸ್ ಆರ್ ಟಿ ಬಸ್ ನಿಲ್ದಾಣಗಳಲ್ಲಿ ಸುಮಾರು 85,143 ಪ್ರಯಾಣಿಕರಿಂದ 1.7 ಕೋಟಿ ರೂ ಹಣ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರ ಸಂಖ್ಯೆ 2013-14 ರಲ್ಲಿ 16, 438 ಇತ್ತು, 2014-15 ರ ವೇಳೆಗೆ 32, 018 ಇದ್ದದ್ದು 2015-16 ರ ವೇಳೆಗೆ 23,166 ರಷ್ಟು ಹೆಚ್ಚಾಗಿದೆ.
ಯಾವುದೇ ಬಸ್ ನಿಲ್ದಾಣಗಳಲ್ಲಿ ನಿಂತು ಧೂಮಪಾನ ಮಾಡಿದರೇ, 2003 ರ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ ಕಾಯ್ದೆ ಪ್ರಕಾರ ಅಂಥವರಿಗೆ 200 ರು ದಂಡ ವಿಧಿಸಲಾಗುತ್ತದೆ.
ರಾಜ್ಯದ ಸುಮಾರು 150 ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ, ಕೇವಲ ಆದಾಯ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ, ಧೂಮಪಾನದಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ತಿಳಿಸಲು ನಾವು ದಂಡ ಹಾಕುತ್ತಿದ್ದೇವೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ನಿಲ್ದಾಣಗಳಲ್ಲಿ ದಂಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡದ ಪ್ರಮಾಣವನ್ನು ಕೇಂದ್ರ ಸರ್ಕಾರ ಏರಿಸಿದೆ. ಇದುವರೆಗೂ 200 ರು ಇದ್ದ ದಂಡದ ಮೊತ್ತವನ್ನು 1,000 ರು.ಗೆ ಏರಿಸಿದೆ.


