
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ,ಕೆ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರಿಗೆ ಕಾರಾಗೃಹ ವಾಸದ ಪ್ರಕ್ರಿಯೆ ಕೇವಲ ಎರಡು ಗಂಟೆಗಳಲ್ಲಿ ಮುಗಿಯಿತು.
ಶಶಿಕಲಾ ಮತ್ತು ಇಳವರಸಿ ಸಂಜೆ 5.15ಕ್ಕೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೋರ್ಟ್ ಗೆ ಹಾಜರಾದರು. ಸಂಜೆ 6.18 ಕ್ಕೆ ಇಬ್ಬರನ್ನು ಜೈಲೊಳಗೆ ಕಳುಹಿಸಲಾಯಿತು. 7 ಗಂಟೆಗೆ ಸುಧಾಕರ್ ಜಡ್ಜ್ ಮುಂದೆ ಹಾಜರಾಗಿ ನಂತರ ಜೈಲು ಸೇರಿದರು.
ಕೋರ್ಟ್ ಆವರಣದೊಳಗೆ ಶಶಿಕಲಾ ಪತಿ ನಟರಾಜನ್ ಅವರನ್ನು ಮಾತ್ರ ಬಿಡಲಾಗಿತ್ತು. ಕೋರ್ಟ್ ರೂಂ ನಿಂದ ಜೇಲಿನ ಸೆಲ್ ನತ್ತ ಶಶಿಕಲಾ ನಡೆದರು. ಈ ವೇಳೆ ಕೆಲವು ಮಹಿಳಾ ಪೊಲೀಸ್ ಪೇದೆಗಳು ಅವರನ್ನು ಹಿಂಬಾಲಿಸಿದರು. ಸೆಲ್ ಒಳಗೆ ಹೋದ ಶಶಿಕಲಾ ಮಹಿಳಾ ಪೇದೆಗಳನ್ನು ನೋಡಿ ನಕ್ಕರು. ಶಶಿಕಲಾ ಬೆಂಬಲಿಗರು ಕೋರ್ಟ್ ಆವರಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು.
55 ನಿಮಿಷಗಳ ಕಾಲ ಸಮಯವನ್ನು ಕೋರ್ಟ್ ರೂಂ ನಲ್ಲಿ ಕಳೆದ ಶಶಿಕಲಾ ಮತ್ತು ಇಳವರಸಿ 100 ಮೀಟರ್ ದೂರವಿರುವ ಕಾರಾಗೃಹಕ್ಕೆ ಪೊಲೀಸ್ ಜೀಪ್ ನಲ್ಲಿ ತೆರಳಲು ಜೀಪ್ ಹತ್ತಿದರು, ಆದರೆ ಈ ವೇಳೆ ಸ್ಥಳದಲ್ಲಿಯೇ ಇದ್ದ ಕರ್ನಾಟಕ ಎಐಎಡಿಎಂಕೆ ಮುಖಂಡ ಪುಗಜೇಂದಿ ನಡೆದುಕೊಂಡು ಹೋಗುವಂತೆ ಸಾಹೇಬರು (ನ್ಯಾಯಾದೀಶರು) ಹೇಳಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಇಳವರಸಿಯ ಇಬ್ಬರು ಮಕ್ಕಳು ಕಾನೂನು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ತನ್ನ ತಾಯಿಗೆ ಕಾಗದ ಪತ್ರಗಳಿಗೆ ಸಹಿ ಮಾಡಲು ಸಹಾಯ ಮಾಡಿದರು. ನಂತರ ಇಬ್ಬರು ಅಳುತ್ತಾ ತನ್ನ ತಾಯಿ ಜೈಲಿನೊಳಗೆ ಹೋಗುವುದನ್ನು ನೋಡುತ್ತಾ ನಿಂತಿದ್ದರು.
ಶಶಿಕಲಾ ಮತ್ತು ಇಳವರಸಿ ಕಾರಾಗೃಹಕ್ಕೆ ತೆರಳಿದ 20 ನಿಮಿಷದ ನಂತರ ಸುಧಾಕರ್ ಕೋರ್ಟ್ ಗೆ ಹಾಜರಾದರು, ನಂತರ ಅವರನ್ನು ಜೈಲಿನ ಸೆಲ್ ಒಳಗೆ ಕಳುಹಿಸಲಾಯಿತು. ಈ ಎಲ್ಲಾ ಪ್ರಕ್ರಿಯೆಲು ಎರಡು ಗಂಟೆಗಳಲ್ಲಿ ಮುಗಿದವು.
ಆರೋಗ್ಯದ ಬಗ್ಗೆ ಜೈಲಿನಲ್ಲಿರುವ ವೈದ್ಯರು ಗಮನ ಹರಿಸುತ್ತಾರೆ, ಅಗತ್ಯವಿರುವ ಎಲ್ಲಾ ರೀತಿಯ ಔಷಧಿಗಳನ್ನು ಕೊಡುತ್ತಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದರು.
Advertisement