ಇಪಿಎಫ್ಒ ವಲಯ ಮುಖ್ಯಸ್ಥ ಶ್ರೀ ವಿ. ವಿಜಯ್ ಕುಮಾರ್ ಕಾಲ್ ಸೆಂಟರ್ ಉದ್ಘಾಟಿಸಿದರು. ಪ್ರಾದೇಶಿಕ ಪಿಎಫ್ ಆಯುಕ್ತ-1, ಶ್ರೀ. ಮನೀಶ್ ಅಗ್ನಿಹೋತ್ರಿ ಹಾಜರಿದ್ದರು.
ಇಪಿಎಫ್ಒ ವಲಯ ಮುಖ್ಯಸ್ಥ ಶ್ರೀ ವಿ. ವಿಜಯ್ ಕುಮಾರ್ ಕಾಲ್ ಸೆಂಟರ್ ಉದ್ಘಾಟಿಸಿದರು. ಪ್ರಾದೇಶಿಕ ಪಿಎಫ್ ಆಯುಕ್ತ-1, ಶ್ರೀ. ಮನೀಶ್ ಅಗ್ನಿಹೋತ್ರಿ ಹಾಜರಿದ್ದರು.

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಘಾಟನೆ

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ಕಾಲ್ ಸೆಂಟರ್ ಉದ್ಘಾಟಿಸಲಾಯಿತು.

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ಕಾಲ್ ಸೆಂಟರ್ ಉದ್ಘಾಟಿಸಲಾಯಿತು. ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಹಕರ ಪಿಎಫ್/ಪಿಂಚಣಿಗೆ ಸಂಬಂಧಪಟ್ಟ ಸಮಸ್ಯೆ, ದೂರು ಅಥವಾ ವಿಚಾರಣೆಗಳನ್ನು ದೂರವಾಣಿ ಮೂಲಕ ತಿಳಿಸುವುದು ಈ ಸೌಲಭ್ಯದ ಮುಖ್ಯ ಉದ್ದೇಶವಾಗಿದೆ.

ಗ್ರಾಹಕ ಸೇವಾ ದೂರವಾಣಿ ಸಂಖ್ಯೆ 18604251068. ಕೆಲಸದ ಸಮಯ: 9.30 AM ನಿಂದ 6.00 PM.

ಇಪಿಎಫ್ಒ ವಲಯ ಮುಖ್ಯಸ್ಥ ಶ್ರೀ ವಿ. ವಿಜಯ್ ಕುಮಾರ್, ಹೆಚ್ಚುವರಿ ಕೇಂದ್ರ ಪಿಎಫ್ ಆಯುಕ್ತ (ಕರ್ನಾಟಕ & ಗೋವಾ ರಾಜ್ಯಗಳು) ಅವರು ಕಾಲ್ ಸೆಂಟರ್ ಉದ್ಘಾಟಿಸಿದರು. ಪ್ರಾದೇಶಿಕ ಪಿಎಫ್ ಆಯುಕ್ತ-1, ಬೆಂಗಳೂರು, ಶ್ರೀ. ಮನೀಶ್ ಅಗ್ನಿಹೋತ್ರಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಇಪಿಎಫ್ ಚಂದಾದಾರರು ಮತ್ತು ಇಪಿಎಸ್ ಪಿಂಚಣಿದಾರರು, ಗ್ರಾಹಕ ಸೇವಾ ಫೋನ್ ನಂಬರ್ ಮೂಲಕ ತಮ್ಮ ಪಿಎಫ್/ಪಿಂಚಣಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಮಾಡಬಹುದು.

ಅಲ್ಲದೆ, ಇಪಿಎಸ್ ಪಿಂಚಣಿದಾರರು ಜೀವನ ಪ್ರಮಾಣ ಮೂಲಕ ತಮ್ಮ ಜೀವನ ಪ್ರಮಾಣಪತ್ರ ಸಲ್ಲಿಸಲು ಕಡೇಯ ದಿನಾಂಕವನ್ನು 28.02.2017 ರವರಗೆ ವಿಸ್ತರಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com