ಈಶ್ವರಪ್ಪಗೆ ಸೆಡ್ಡು ಹೊಡೆಯಲು ಸಿದ್ಥತೆ: ಬಿಎಸ್'ವೈ ಬ್ರಿಗೇಡ್ ನಡೆಸಲು ಯುವ ಬಿಜೆಪಿ ಕಾರ್ಯಕರ್ತರ ನಿರ್ಧಾರ
ಕಾರವಾರ: ಕಮಲ ಪಕ್ಷದಲ್ಲಿ ರಾಯಣ್ಣ ಬ್ರಿಗೇಡ್ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಕೆ.ಎಸ್.ಈಶ್ವರಪ್ಪಗೆ ಸೆಡ್ಡು ಹೊಡೆಯಲು ಬಿಜೆಪಿ ಯುವ ಕಾರ್ಯಕರ್ತರು ಯೋಜನೆಗಳನ್ನು ರೂಪಿಸಿದ್ದು, ರಾಜ್ಯದಾದ್ಯಂತ ಬಿ.ಎಸ್. ಯಡಿಯೂರಪ್ಪ ಬ್ರಿಗೇಡ್ ನಡೆಸಲು ಮುಂದಾಗಿದ್ದಾರೆ.
ಈ ಈ ಕುರಿತಂತೆ ಮಾಡನಾದಿರುವ ರಾಜ್ಯ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಭೀಮಶಂಕರ್ ಪಾಟೀಲ್ ಅವರು, ಕೆ.ಎಸ್ ಈಶ್ವರಪ್ಪ ಅವರಿಗೆ ತಿರುಗೇಟು ನೀಡಲು ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದ್ದು, ರಾಜ್ಯದಾದ್ಯಂತ ಬಿಎಸ್'ವೈ ಬ್ರಿಗೇಡ್ 'ನಮೋ ಬ್ರಿಗೇಡ್' ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ 2014ರ ಲೋಕಸಭಾ ಚುನಾವಣೆಯಲ್ಲಿಯೂ ನಮೋ ಬ್ರಿಗೇಡ್ ನ್ನು ನಡೆಸಲಾಗಿತ್ತು. ಕಲಬುರ್ಗಿಯಲ್ಲಿ ನಡೆಸಲಾಗದ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮತ್ತೆ ರಾಜ್ಯದಾದ್ಯಂತ ನಮೋ ಬ್ರಿಗೇಡ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿಯಿತು ಎಂದು ಅವರು ತಿಳಿಸಿದ್ದಾರೆ.
ವೈಯಕ್ತಿಕ ಲಾಭಕ್ಕಾಗಿ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ನ್ನು ಪ್ರಾರಂಭಿಸಿದ್ದರು. ಈ ಮೂಲಕ ಪಕ್ಷದಲ್ಲಿ ಪಕ್ಷವಿರೋಧಿ ಚಟುವಟಿಗಳನ್ನು ನಡೆಸಿ ಪಕ್ಷದ ವರ್ಚಸ್ಸಿಗೆ ಕುತ್ತು ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಯಣ್ಣ ಬ್ರಿಗೇಡ್ ಪ್ರಾರಂಭಿಸುವುದಕ್ಕೂ ಮುನ್ನ ಹಿಂದೆಂದೂ ರಾಯಣ್ಣರ ಬಗ್ಗೆ ಈಶ್ವರಪ್ಪ ಅವರು ಮಾತನಾಡಿರಲಿಲ್ಲ. ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಈಶ್ವರಪ್ಪ ಅವರಿಗೇ ಏನೂ ತಿಳಿದಿಲ್ಲ. ಆದರೆ, ಕಳೆದ ಕೆಲ ತಿಂಗಳಿನಿಂದ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಪಕ್ಷದ ಬಗ್ಗೆ ಹಾಗೂ ಪಕ್ಷತ ನಿಯಮ, ತತ್ತ್ವಗಳ ಬಗ್ಗೆ ಮಾತನಾಡುತ್ತಿದ್ದ ಈಶ್ವರಪ್ಪ ಅವರು, ಪಕ್ಷಕ್ಕಾಗಿ ತಾವು ಮುಡಿಪಾಗಿರುವುದಾಗಿ ಹೇಳುತ್ತಿದ್ದರು. ಆದರೆ, ಇದೀಗ ಯಡಿಯೂರಪ್ಪ ಅವರ ಜನಪ್ರಿಯತೆಯನ್ನು ಕಂಡು ಅಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿಯೇ ಪಕ್ಷದ ವರ್ಚಸ್ಸು ಹಾಳು ಮಾಡಲು ರಾಯಣ್ಣ ಬ್ರಿಗೇಡ್ ನ್ನು ಆರಂಭಿಸಿದ್ದಾರೆಂದು ಪಾಟೀಲ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ