ಬೆಂಗಳೂರು: ಮಲ್ಯ ಒಡೆತನದ ಯುಬಿ ಸಿಟಿ ಕಚೇರಿ ಮೇಲೆ ಸಿಬಿಐ ದಾಳಿ

ಉದ್ಯಮಿ ವಿಜಯ ಮಲ್ಯಗೆ ಸೇರಿದ ಯುಬಿ ಸಿಟಿಯಲ್ಲಿರುವ ಯುಬಿ ಗ್ರೂಪ್‌ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯ ಮಲ್ಯ ಮನೆ, ಮನೆಯ ,,,,
ವಿಜಯಮಲ್ಯ
ವಿಜಯಮಲ್ಯ

ಬೆಂಗಳೂರು: ಉದ್ಯಮಿ ವಿಜಯ ಮಲ್ಯಗೆ ಸೇರಿದ ಯುಬಿ ಸಿಟಿಯಲ್ಲಿರುವ ಯುಬಿ ಗ್ರೂಪ್‌ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯ ಮಲ್ಯ ಮನೆ, ಮನೆಯ ಪಕ್ಕದಲ್ಲಿರುವ ಕಚೇರಿ ಮತ್ತು ಯುಬಿ ಸಿಟಿಯಲ್ಲಿರುವ ಕಚೇರಿ ಮೇಲೆ ದಾಳಿ ನಡೆದಿದೆ.

ದೆಹಲಿಯಿಂದ ಬಂದ 12ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಬೆಳಗ್ಗೆ 7 ಗಂಟೆಯಿಂದ ಸತತ 4 ತಾಸು ದಾಖಲೆಗಳ ಪರಿಶೀಲನೆ ನಡೆಸಿದರು. ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧ ಮಲ್ಯ ವಿರುದ್ದ ದಾಖಲಾದ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅವರನ್ನು ಬಂಧಿಸಬೇಕು ಮತ್ತು ಪಾಸ್‌ಪೋರ್ಟ್ ಮುಟ್ಟುಗೋಲಿಗೆ ಆಗ್ರಹಿಸಿ ಒಟ್ಟು ಮೂರು ದೂರುಗಳನ್ನು ಎಸ್‌ಬಿಐ ದಾಖಲಿಸಿತ್ತು. ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ 6 ಸಾವಿರ ಕೋಟಿ ಸಾಲ ಮರು ಪಾವತಿ ಮಾಡಬೇಕಾಗಿರುವ ವಿಜಯ ಮಲ್ಯ ಆಸ್ತಿ ಮುಟ್ಟುಗೋಲಿಗೆ ಸಾಲಾ ವಸೂಲಾತಿ ನ್ಯಾಯಾಧಿಕರಣ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

ಎಸ್‌ಬಿಐ ನೇತೃತ್ವದ ಒಕ್ಕೂಟ ಬ್ಯಾಂಕ್‌ಗಳಿಂದ ಉದ್ಯಮಿ ವಿಜಯ್ ಮಲ್ಯ ಅವರು ಪಡೆದಿದ್ದ 6,203 ಕೋಟಿ ಸಾಲವನ್ನು ಶೇಕಡಾ 11.5 ಬಡ್ಡಿಯೊಂದಿಗೆ ವಸೂಲಿ ಮಾಡುವಂತೆ ಸಾಲ ವಸೂಲಾತಿ ನ್ಯಾಯಾಧಿಕರಣ(ಡಿಆರ್‌ಟಿ) ಆದೇಶಿಸಿದೆ.

ಯುಬಿ ಕಚೇರಿಗಳಿಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿರುವುದು ನಿಜ. ನಾವು  ಎಲ್ಲ ರೀತಿಯಲ್ಲೂ ಸಹಕರಿಸಿದ್ದೇವೆ ಎಂದು  ವಕ್ತಾರ ಸ್ಪಷ್ಟಪಡಿಸಿದ್ದಾರೆ. ದಾಳಿಯನ್ನು ಸಿಬಿಐ ಅಧಿಕಾರಿಗಳು ಸಹ ಸ್ಪಷ್ಟ ಪಡಿಸಿದ್ದಾರೆ, ಆದರೆ ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com