ಕರ್ನಾಟಕ ನೂತನ ಲೋಕಾಯುಕ್ತರಾಗಿ ನ್ಯಾ.ಪಿ. ವಿಶ್ವನಾಥ್ ಶೆಟ್ಟಿ ನೇಮಕ

ಮಹತ್ತರ ಬೆಳವಣಿಗೆಯಲ್ಲಿ ನೀರಿಕ್ಷೆಯಂತೆಯೇ ನ್ಯಾಯಮೂರ್ತಿ ಪಿ, ವಿಶ್ವನಾಥ್ ಶೆಟ್ಟಿ ಅವರು ನೂತನ ಕರ್ನಾಟಕ ಲೋಕಾಯುಕ್ತರಾಗಿ ಆಯ್ಕೆಯಾಗಿದ್ದಾರೆ.
ನ್ಯಾ.ಪಿ. ವಿಶ್ವನಾಥ್ ಶೆಟ್ಟಿ (ಸಂಗ್ರಹ ಚಿತ್ರ)
ನ್ಯಾ.ಪಿ. ವಿಶ್ವನಾಥ್ ಶೆಟ್ಟಿ (ಸಂಗ್ರಹ ಚಿತ್ರ)

ಬೆಂಗಳೂರು: ಮಹತ್ತರ ಬೆಳವಣಿಗೆಯಲ್ಲಿ ನೀರಿಕ್ಷೆಯಂತೆಯೇ ನ್ಯಾಯಮೂರ್ತಿ ಪಿ, ವಿಶ್ವನಾಥ್ ಶೆಟ್ಟಿ ಅವರು ನೂತನ  ಕರ್ನಾಟಕ ಲೋಕಾಯುಕ್ತರಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರ 2ನೇ ಬಾರಿಗೆ ನ್ಯಾ.ಪಿ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದ ಹಿನ್ನಲೆಯಲ್ಲಿ ಮತ್ತು ಅವರ ಪರವಾದ ಪೂರಕವಾದ ಮಾಹಿತಿಗಳನ್ನು ನೀಡಿದ ಹಿನ್ನಲೆಯಲ್ಲಿ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರು  ವಿಶ್ವನಾಥ್ ಶೆಟ್ಟಿ ಅವರನ್ನು ಕರ್ನಾಟಕದ ನೂತನ ಲೋಕಾಯುಕ್ತರಾಗಿ ನೇಮಕ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ. ಆ ಮೂಲಕ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಲೋಕಾಯುಕ್ತಕ್ಕೆ ಹೊಸ ಮುಖ್ಯಸ್ಥರನ್ನು ನೇಮಕ  ಮಾಡಿದ್ದಾರೆ.

ಈ ಹಿಂದೆ ನ್ಯಾಯಾಂಗ ಬಡಾವಣೆಯಲ್ಲಿ ಸೈಟ್ ಪಡೆದ ಆರೋಪ ಮತ್ತು ವಿಶ್ವನಾಥ್ ಶೆಟ್ಟಿ ಅವರ ನಿಷ್ಪಕ್ಷಪಾತ ಕಾರ್ಯದ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು  ತಿರಸ್ಕರಿಸಿದ್ದರು. ಆದರೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವಿಶ್ವನಾಥ್ ಶೆಟ್ಟಿ ಅವರ ಕಾರ್ಯ ವೈಖರಿ ಮತ್ತು ನಿಷ್ಪಕ್ಷಪಾತ ಕಾರ್ಯದ ಕುರಿತಂತೆ ಸರ್ಕಾರದ ಮನವರಿತೆ ಮಾಡಿಕೊಟ್ಟಿತ್ತು. ವಕೀಲರಾಗಿ ಅವರು ವಿವಿಧ  ಪ್ರಕರಣಗಳನ್ನು ವಾದಿಸಿದ್ದಾರೆ. ಇದು ಅವರ ಕಾರ್ಯವಾಗಿದ್ದು, ಅವರಿಗೆ ನೀಡಿದ್ದ ಕಾರ್ಯವನ್ನು ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಹೀಗಾಗಿ ಲೋಕಾಯುಕ್ತ ಜವಾಬ್ದಾರಿಯನ್ನೂ ಕೂಡ ಅವರು ಯಾವುದೇ ಪಕ್ಷಪಾತವಿಲ್ಲದೇ ಮಾಡುತ್ತಾರೆ ಎಂಬ ಭರವಸೆ ನೀಡುತ್ತಿರುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು  ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರನ್ನು ಕರ್ನಾಟಕದ ನೂತನ ಲೋಕಾಯುಕ್ತರಾಗಿ ನೇಮಕ ಮಾಡುವ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com