ರಾಜ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳ ಸಾವು: ತನಿಖೆಗೆ ಸಮಿತಿ ರಚನೆ

ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರುತ್ತಿರುವುದರ ಸಂಬಂಧ ತನಿಖೆ ನಡೆಸಲು ಅರಣ್ಯ ಇಲಾಖೆ ಮೂರು ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರುತ್ತಿರುವುದರ ಸಂಬಂಧ ತನಿಖೆ ನಡೆಸಲು ಅರಣ್ಯ ಇಲಾಖೆ ಮೂರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ.

ನಾಗರಹೊಳೆ ಹಾಗೂ ಬಂಡಿಪುರ ಅಭಯಾರಣ್ಯ ಎರಡು ತಿಂಗಳಲ್ಲಿ 10 ಹುಲಿಗಳು ದಾರುಣ ಸಾವನ್ನಪ್ಪಿದ್ದು ಇವುಗಳ ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಇಚ್ಚೀಚೆಗೆ ನಡೆದ ಟೈಗರ್ ಕನ್ಸರ್ವೇಶನ್ ಫೌಂಡೆಶನ್ ಸಭೆಯಲ್ಲಿ ಹುಲಿಗಳ ಸಾವಿನ ವಿಷಯದ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಹುಲಿಗಳ ಸಾವಿನ ಸಂಖ್ಯೆ ಏರುತ್ತಿರುವುದರ ಕಾರಣ ತಿಳಿದುಕೊಳ್ಳಲು ಮೂರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾತು ಎಂದು ತಿಳಿಸಿದ್ದಾರೆ.

ಜನವರಿ 17 ರಂದು ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ಗ್ರಾಮದಲ್ಲಿ ಹೆಣ್ಣು ಹುಲಿ ಸಾವು ವಿವಾದಕ್ಕೆ ಕಾರಣವಾಗಿತ್ತು. ಓವರ್ ಡೋಸ್ ಅರಿವಳಿಕೆ ಮದ್ದಿನಿಂದಾಗ ಹುಲಿ ಸಾವನ್ನಪ್ಪಿದೆ ಎಂಬುದರ ಬಗ್ಗೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಓನರ್ ಡೋಸ್ ನಿಂದಾಗಿ ಮೃತಪಟ್ಟಿರುವ ಹೆಣ್ಣು ಹುಲಿಯ ಮರಣೋತ್ತರ ಪರೀಕ್ಷೆಗಾಗಿ ಇನ್ನೂ ಕಾಯುತ್ತಿದ್ದೇವೆ, ವರದಿ ಸಿಕ್ಕ ಕೂಡಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ನಾಗರಹೊಳೆ ಹುಲಿ ಮೀಸಲು ಅರಣ್ಯ ನಿರ್ದೇಶಕ ಮಣಿಕಂಠನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com