ಸಾಂಪ್ರದಾಯಿಕ ಕ್ರೀಡೆ ಕಂಬಳದ ಪರ ನಾನಾ ಸಂಘಟನೆಗಳ ಬೆಂಬಲ

ತಮಿಳುನಾಡಿನ ಜಲ್ಲಿಕಟ್ಟು ವಿವಾದ ಬಗೆಹರಿಯುತ್ತಿದ್ದಂತೆ ರಾಜ್ಯದಲ್ಲೂ ಕಂಬಳ ಕಹಳೆ ಮೊಳಗುತ್ತಿದ್ದು, ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ರಾಜ್ಯದ ನಾನಾ ಸಂಘಟನೆಗಳು ಬೆಂಬಲಗಳನ್ನು ವ್ಯಕ್ತಪಡಿಸತೊಡಗಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮಿಳುನಾಡಿನ ಜಲ್ಲಿಕಟ್ಟು ವಿವಾದ ಬಗೆಹರಿಯುತ್ತಿದ್ದಂತೆ ರಾಜ್ಯದಲ್ಲೂ ಕಂಬಳ ಕಹಳೆ ಮೊಳಗುತ್ತಿದ್ದು, ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ರಾಜ್ಯದ ನಾನಾ ಸಂಘಟನೆಗಳು ಬೆಂಬಲಗಳನ್ನು ವ್ಯಕ್ತಪಡಿಸತೊಡಗಿವೆ.

ರಾಜಧಾನಿ ಕಂಬಳ ಕ್ರಿಯಾ ಸಮಿತಿ ಸೇರಿದಂದೆ ಸಾಕಷ್ಟು ಸಂಘಟನೆಗಳು ರಾಜ್ಯದ ಹಲವೆಡೆ ನಿನ್ನೆ ಕಂಬಳ ಕ್ರೀಡೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಕಂಬಂಳ ಕ್ರೀಡೆಗೆ ಆಗ್ರಹಿಸಿ ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕಂಬಳ ನಿಷೇಧವನ್ನು ತೆರೆವುಗೊಳಿಸಿ, ಕ್ರೀಡೆ ನಡೆಸಲು ಕಾನೂನು ರಚನೆ ಮಾಡುವಂತೆ ಆಗ್ರಹಿಸಿದವು.

ಫೆಬ್ರವರಿ 1 ರಂದು ವಿಧಾನಮಂಡಲ ಅಧಿವೇಶನ ನಡೆಯಲಿದೆ. ಕಂಬಳ ಕ್ರೀಡೆ ಗುರಿತಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಕ್ರೀಡೆ ಬಗ್ಗೆ ಹೈಕೋರ್ಟ್ ತೆಗೆದುಕೊಳ್ಳುವ ನಿರ್ಧಾರ ಬಳಿಕ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ನ್ಯಾಯಾಲಯದ ಆದೇಶದ ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com